Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಸಹಿಷ್ಣುತೆ ಇರುವ ಮುಸ್ಲಿಮರು ಅತೀ ಕಡಿಮೆ,...

ಸಹಿಷ್ಣುತೆ ಇರುವ ಮುಸ್ಲಿಮರು ಅತೀ ಕಡಿಮೆ, ಉನ್ನತ ಹುದ್ದೆಗಾಗಿ ಮುಖವಾಡ ಧರಿಸುತ್ತಾರೆ: ಕೇಂದ್ರ ಸಚಿವ

9 May 2023 11:18 PM IST
share
ಸಹಿಷ್ಣುತೆ ಇರುವ ಮುಸ್ಲಿಮರು ಅತೀ ಕಡಿಮೆ, ಉನ್ನತ ಹುದ್ದೆಗಾಗಿ ಮುಖವಾಡ ಧರಿಸುತ್ತಾರೆ: ಕೇಂದ್ರ ಸಚಿವ

ಹೊಸದಿಲ್ಲಿ, ಮೇ 9: ಸಹಿಷ್ಣು ಮುಸ್ಲಿಮರು ಬೆರಳೆಣಿಕೆಯ ಸಂಖ್ಯೆಯಲ್ಲಿದ್ದಾರೆ ಎಂದು ಹೇಳುವ ಮೂಲಕ ಕೇಂದ್ರ ಸಹಾಯಕ ಕಾನೂನು ಮತ್ತು ನ್ಯಾಯ ಸಚಿವ ಸತ್ಯಪಾಲ ಸಿಂಗ್ ಬಾಲ್ ಅವರು ವಿವಾದವೊಂದನ್ನು ಹುಟ್ಟುಹಾಕಿದ್ದಾರೆ. ಇಷ್ಟೇ ಅಲ್ಲ, ಉಪರಾಷ್ಟ್ರಪತಿ, ರಾಜ್ಯಪಾಲ ಅಥವಾ ವಿವಿ ಕುಲಪತಿಯಂತಹ ಹುದ್ದೆಗಳಿಗೆ ಏರಬಹುದಾಗಿರುವುದರಿಂದ ಸಾರ್ವಜನಿಕ ಜೀವನದಲ್ಲಿ ಸಹಿಷ್ಣುತೆಯ ಮುಖವಾಡ ಧರಿಸುವುದು ಒಂದು ತಂತ್ರವಾಗಿದೆ. ಆದರೆ ಮುಸ್ಲಿಮ್ ಸಮುದಾಯದ ಇಂತಹ ‘ತಥಾಕಥಿತ ಬುದ್ಧಿಜೀವಿಗಳ ’ ನಿಜವಾದ ಮುಖವು ಅವರು ಅಧಿಕಾರ ಪೂರ್ಣಗೊಳಿಸಿದ ಅಥವಾ ನಿವೃತ್ತಿಯಾದ ಬಳಿಕ ನೀಡುವ ಹೇಳಿಕೆಗಳಿಂದ ಬಹಿರಂಗಗೊಳ್ಳುತ್ತದೆ ಎಂದೂ ಅವರು ಆರೋಪಿಸಿದ್ದಾರೆ.

ಪತ್ರಕರ್ತರಿಗೆ ಪ್ರಶಸ್ತಿಗಳನ್ನು ಪ್ರದಾನಿಸಲು ಆರೆಸ್ಸೆಸ್ನ ಮಾಧ್ಯಮ ವಿಭಾಗ ಇಂದ್ರಪ್ರಸ್ಥ ವಿಶ್ವ ಸಂವಾದ ಕೇಂದ್ರವು ಸೋಮವಾರ ಆಯೋಜಿಸಿದ್ದ ದೇವಋಷಿ ನಾರದ ಪತ್ರಕಾರ ಸಮ್ಮಾನ್ ಸಮಾರೋಹ್ನಲ್ಲಿ ಮಾತನಾಡುತ್ತಿದ್ದ ಬಾೆಲ್,‘ಸಹಿಷ್ಣು ಮುಸ್ಲಿಮರನ್ನು ಬೆರಳಿನಲ್ಲಿ ಎಣಿಸಬಹುದು. ನನ್ನ ಅಭಿಪ್ರಾಯದಲ್ಲಿ ಅವರ ಸಂಖ್ಯೆ ಸಾವಿರವನ್ನೂ ದಾಟುವುದಿಲ್ಲ ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಾಹಿತಿ ಆಯುಕ್ತ ಉದಯ ಮಹೂರ್ಕರ್ ಅವರ ಭಾಷಣದ ಬೆನ್ನಲ್ಲೇ ಬಾೆಲ್ರ ಈ ಹೇಳಿಕೆ ಹೊರಬಿದ್ದಿದೆ.

ಭಾರತವು ಇಸ್ಲಾಮಿಕ್ ಮೂಲಭೂತವಾದದ ವಿರುದ್ಧ ಹೋರಾಡಲೇಬೇಕು,ಆದರೆ ಸಹಿಷ್ಣು ಮುಸ್ಲಿಮರನ್ನು ಜೊತೆಯಲ್ಲಿ ಕರೆದೊಯ್ಯಬೇಕು ಎಂದು ಹೇಳಿದ್ದ ಮಹೂರ್ಕರ್,ಮುಘಲ್ ಚಕ್ರವರ್ತಿ ಅಕ್ಬರ್ ತನ್ನ ಆಡಳಿತಾವಧಿಯಲ್ಲಿ ಹಿಂದು-ಮುಸ್ಲಿಮ್ ಏಕತೆಯನ್ನು ಪೋಷಿಸಲು ಶ್ರಮಿಸಿದ್ದರು. ಛತ್ರಪತಿ ಶಿವಾಜಿ ಮಹಾರಾಜರೂ ಅವರನ್ನು ಧನಾತ್ಮಕವಾಗಿ ನೋಡಿದ್ದರು. ಹಿಂದು-ಮುಸ್ಲಿಮ್ ಏಕತೆಯನ್ನು ಸಾಧಿಸಲು ಅಕ್ಬರ್ ತನ್ನ ಅತ್ಯುತ್ತಮ ಪ್ರಯತ್ನಗಳನ್ನು ಮಾಡಿದ್ದರು ಎಂದು ಪ್ರತಿಪಾದಿಸಿದ್ದರು.
ತನ್ನ ಭಾಷಣದಲ್ಲಿ ಇದನ್ನು ತಳ್ಳಿಹಾಕಿದ ಬಾೆಲ್,ಅಕ್ಬರ್ರ ಪ್ರಯತ್ನಗಳನ್ನು ಕೇವಲ ‘ತಂತ್ರಗಳು ’ಎಂದು ಬಣ್ಣಿಸಿದರಲ್ಲದೆ,ಜೋಧಾಬಾಯಿ ಜೊತೆ ಅಕ್ಬರ್ ವಿವಾಹವು ಅವರ ರಾಜಕೀಯ ಕಾರ್ಯತಂತ್ರದ ಭಾಗವಾಗಿತ್ತು ಎಂದು ಆರೋಪಿಸಿದರು. ‘ಅದು ಅವರ ಹೃದಯದಿಂದ ಬಂದಿರಲಿಲ್ಲ,ಇಲ್ಲದಿದ್ದರೆ ಚಿತ್ತೋಡಗಡ್ ನರಮೇಧ ನಡೆಯುತ್ತಿರಲಿಲ್ಲ. ಮುಘಲರ ಅವಧಿಯಲ್ಲಿ,ಔರಂಗಜೇಬ್ನ ಕಾಲದಲ್ಲಿ ನಡೆದಿದ್ದ ಕೃತ್ಯಗಳನ್ನೇ ನೋಡಿ. ನಾವು ಬದುಕುಳಿದಿದ್ದು ಹೇಗೆ ಎಂದು ನನಗೆ ಕೆಲವೊಮ್ಮೆ ಅಚ್ಚರಿಯಾಗುತ್ತದೆ. ಕ್ರಿ.ಶ.1192ರಲ್ಲಿ ಮುಹಮ್ಮದ್ ಘೋರಿ ರಜಪೂತ ದೊರೆ ಪೃಥ್ವಿರಾಜ ಚೌಹಾಣರನ್ನು ಸೋಲಿಸಿದಾಗಲೇ ಭಾರತದ ಕೆಟ್ಟ ದಿನಗಳು ಆರಂಭಗೊಂಡಿದ್ದವು ’ಎಂದು ಹೇಳಿದರು.
ಧಾರ್ಮಿಕ ಮತಾಂತರದ ವಿಷಯವನ್ನು ಪ್ರಸ್ತಾಪಿಸಿದ ಬಾೆಲ್,ಖಡ್ಗಗಳ ಭೀತಿಯಡಿ ಬೇರೊಂದು ಧರ್ಮಕ್ಕೆ ಮತಾಂತರಗೊಂಡವರಿಗಿಂತ ‘ಗಂಡೆ -ತಾಬೀಝ್ ’ ಮೂಲಕ ಮತಾಂತರಗೊಂಡವರ ಸಂಖ್ಯೆ ಹೆಚ್ಚಿದೆ ಎಂದು ಆರೋಪಿಸಿದರು.

‘ಅದು ಖ್ವಾಝಾ ಗರೀಬ್ ನವಾಜ್ ಸಾಹೇಬ್,ಹಝರತ್ ನಿಝಾಮುದ್ದೀನ್ ಔಲಿಯಾ ಅಥವಾ ಸಲೀಂ ಚಿಸ್ತಿ ಆಗಿರಲಿ,ಇಂದಿಗೂ ನಮ್ಮ ಸಮುದಾಯದ ಜನರು ಹರಕೆಗಳನ್ನು ಹೊತ್ತುಕೊಂಡು ಅಲ್ಲಿಗೆ ದೊಡ್ಡ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ ’ ಎಂದರು.

ಅಷ್ಟು ದೀರ್ಘಾವಧಿಗೆ ತಾವು ಆಡಳಿತಗಾರರಾಗಿದ್ದರಿಂದ ತಾವು ಹೇಗೆ ಪ್ರಜೆಗಳಾಗಲು ಸಾಧ್ಯ ಎಂದು ಅಲ್ಪಸಂಖ್ಯಾತ ಸಮುದಾಯದವರು ಭಾವಿಸಿದ್ದಾರೆ ಎಂದು ಹೇಳಿದ ಬಾೆಲ್,ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುವುದರಲ್ಲಿ ಪರಿಹಾರ ಅಡಗಿದೆ. ಮುಂದೊಂದು ದಿನ ಅದು ಸಮಸ್ಯೆಗೆ ಸ್ವಲ್ಪ ಪರಿಹಾರವನ್ನು ನೀಡಬಹುದು ಎಂದರು.
‘ಹಿಂದು ರಾಷ್ಟ್ರ ’ ಭಾರತದ ಮೂಲ ರಚನೆಯಾಗಿದೆ. ಸಂವಿಧಾನದ ಮೂಲ ರಚನೆಯ ಕುರಿತು ಮತ್ತು ಅದನ್ನು ಹೇಗೆ ಬದಲಿಸಬಹುದು ಎಂಬ ಬಗ್ಗೆ ಜನರು ಮಾತನಾಡುತ್ತಿರುತ್ತಾರೆ. 1192ಕ್ಕೆ ಮುನ್ನ ಈ ದೇಶದ ಮೂಲ ರಚನೆಯು ಅಖಂಡ ಭಾರತ ಹಿಂದು ರಾಷ್ಟ್ರ ಎಂದಾಗಿತ್ತು.

ಅವರು (ಅಲ್ಪಸಂಖ್ಯಾತರು) ಮದರಸಾದಲ್ಲಿ ಓದಿದರೆ ಅವರು ಉರ್ದು,ಅರೆಬಿಕ್ ಮತ್ತು ಪರ್ಶಿಯನ್ ಕಲಿಯುತ್ತಾರೆ. ಎಲ್ಲ ಸಾಹಿತ್ಯಗಳು ಒಳ್ಳೆಯವೇ,ಆದರೆ ಇಂತಹ ಅಧ್ಯಯನಗಳಿಂದ ಅವರು ಪೇಷ್-ಇಮಾಮ್ಗಳಾಗುತ್ತಾರೆ. ಭೌತಶಾಸ್ತ್ರ ಮತ್ತು ರಾಸಾಯನಿಕ ಶಾಸ್ತ್ರ ಓದಿದರೆ ಅವರು ಅಬ್ದುಲ್ ಕಲಾಂ ಆಗುತ್ತಾರೆ.
*ಕೇಂದ್ರ ಸಚಿವ ಸತ್ಯಪಾಲ ಸಿಂಗ್ ಬಘೇಲ್

share
Next Story
X