ಉಡುಪಿ: ನಾಡ್ಪಾಲು ಮತಗಟ್ಟೆಯಲ್ಲಿ ಶೇ.50 ಮತದಾನ

ಹೆಬ್ರಿ: ಜಿಲ್ಲೆಯ ನಕ್ಸಲ್ ಬಾಧಿತ ಮತಗಟ್ಟೆಗಳಲ್ಲಿ ಒಂದಾಗಿರುವ ನಾಡ್ಪಾಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಬೆಳಗ್ಗೆಯಿಂದ ಬಿರುಸಿನ ಮತದಾನವಾಗಿದೆ. ಪೂರ್ವಾಹ್ನ 11:10ರ ಸುಮಾರಿಗೆ ಶೇ.50ರಷ್ಟು ಮತ ಚಲಾವಣೆಯಾಗಿದೆ.
ಮತಗಟ್ಟೆಯಲ್ಲಿರುವ ಒಟ್ಟು 380 ಮತದಾರರ ಪೈಕಿ 192 ಮಂದಿ ಮತ ಚಲಾಯಿಸಿದ್ದಾರೆ. 94 ಪುರುಷ ಹಾಗೂ 98 ಮಹಿಳಾ ಮತದಾರರು ಈಗಾಗಲೇ ತಮ್ಮ ಹಕ್ಕು ಚಲಾಯಿಸಿದ್ದಾರೆ.
Next Story





