ವಿಧಾನಸಭಾ ಚುನಾವಣೆ: 11 ಗಂಟೆ ವೇಳೆ ದ.ಕ. ಜಿಲ್ಲೆಯಲ್ಲಿ 28.16 ಶೇ. ಮತದಾನ
ಪುತ್ತೂರಿನ ಮತಗಟ್ಟೆಗಳಿಗೆ ಜಿಲ್ಲಾಧಿಕಾರಿ ಭೇಟಿ

ಪುತ್ತೂರಿನ ಮತಗಟ್ಟೆಗಳಿಗೆ ಜಿಲ್ಲಾಧಿಕಾರಿ ಭೇಟಿ
ಮಂಗಳೂರು, ಮೇ 10: ರಾಜ್ಯ ವಿಧಾನಸಭೆಗೆ ಇಂದು ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆ ಶಾಂತಿಯುತವಾಗಿದ್ದು, ಪೂರ್ವಾಹ್ನ 11 ಗಂಟೆ ಸುಮಾರಿಗೆ ದ.ಕ. ಜಿಲ್ಲೆಯಲ್ಲಿ ಒಟ್ಟು 28.16 ಶೇ. ಮತದಾನವಾಗಿದೆ.
ಪೂರ್ವಾಹ್ನ 11 ಗಂಟೆಯ ವೇಳೆ ಸುಳ್ಯದಲ್ಲಿ ಗರಿಷ್ಠ ಶೇ 30.52 ಮತದಾನವಾಗಿದೆ. 9 ಗಂಟೆಯ ವೇಳೆಗೆ ಇಲ್ಲಿ ಶೇ 10.76 ಮತದಾನವಾಗಿತ್ತು.
ಬೆಳ್ತಂಗಡಿ ಶೇ 28.89, ಮೂಡುಬಿದಿರೆ ಶೇ 27.52, ಮಂಗಳೂರು ನಗರ ಉತ್ತರ ಶೇ ಶೇ 27.31, ಮಂಗಳೂರು ನಗರ ದಕ್ಷಿಣ ಶೇ 25.57, ಮಂಗಳೂರು ಶೇ ಶೇ 26.54, ಬಂಟ್ವಾಳ ಶೇ 29.51, ಪುತ್ತೂರು ಶೇ 29.79ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗದ ವರದಿ ತಿಳಿಸಿದೆ.
ದ.ಕ. ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಇಂದು ಬೆಳಗ್ಗೆ ಪುತ್ತೂರಿನ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ, ಮತದಾನ ಪ್ರಕ್ರಿಯೆಯನ್ನು ವೀಕ್ಷಿಸಿದರು.
Next Story









