ಉಡುಪಿ ಜಿಲ್ಲೆಯಲ್ಲಿ 11 ಗಂಟೆಗೆ ಶೇ.30.45 ಮತದಾನ

ಉಡುಪಿ, ಮೇ 10: ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ, ಉಡುಪಿ ಜಿಲ್ಲೆಯಲ್ಲಿ ಬುಧವಾರ ಪೂರ್ವಾಹ್ನ 11 ಗಂಟೆಯವರೆಗೆ ಶೇ.30.45ರಷ್ಟು ಮತದಾನವಾಗಿದೆ. ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ 11 ಗಂಟೆ ವೇಳೆ ಗರಿಷ್ಠ 33 ಶೇ. ಮತದಾನವಾಗಿದ್ದರೆ, ಬೈಂದೂರಿನಲ್ಲಿ ಕನಿಷ್ಠ 27.06% ಮತದಾನವಾಗಿದೆ.
ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ 27.06%, ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ 32.14%, ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ 29.44 %, ಕಾಪು ವಿಧಾನಸಭಾ ಕ್ಷೇತ್ರದಲ್ಲಿ 30.72%, ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ 33% ಮತದಾನವಾಗಿರುವ ವರದಿಗಳು ಬಂದಿವೆ.
Next Story