ಮೂಡಿಗೆರೆ: ಮದುವೆಗೂ ಮುನ್ನ ಮತದಾನದಲ್ಲಿ ಪಾಲ್ಗೊಂಡ ನವವಧು

ಚಿಕ್ಕಮಗಳೂರು, ಮೇ 10: ರಾಜ್ಯ ವಿಧಾನಸಭಾ ಚುನಾವಣೆಗೆ ಮತದಾನ ಬೆಳಗ್ಗೆ 7 ಗಂಟೆಯಿಂದ ಆರಂಭವಾಗಿದ್ದು, ರಾಜ್ಯಾದ್ಯಂತ ಮತದಾನ ಬಿರುಸಿನಿಂದ ಸಾಗಿದೆ.
ಚಿಕ್ಕಮಗಳೂರು ಜಿಲ್ಲೆಯು ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ ಗ್ರಾಮದಲ್ಲಿ ಮದುಮಗಳೊಬ್ಬರು ಮದುವೆ ಚಪ್ಪರಕ್ಕೆ ಹೋಗುವ ಮೊದಲು ಮತಗಟ್ಟೆಗೆ ಆಗಮಿಸಿ ಮತಚಲಾಯಿಸುವ ಮೂಲಕ ಮಾದರಿ ಎನಿಸಿಕೊಂಡಿದ್ದಾರೆ.
ಮನೆಯಲ್ಲಿ ಶೃಂಗಾರಗೊಂಡ ನವವಧು ಸುಶ್ಮಿತಾ ನೇರವಾಗಿ ಮಾಕೋನಹಳ್ಳಿಯ ಮತಗಟ್ಟೆಗೆ ತೆರಳಿ ಹಕ್ಕು ಚಲಾಯಿಸಿದ್ದಾರೆ. ಬಳಿಕ ಮೂಡಿಗೆರೆಯ ರೈತ ಭವನದಲ್ಲಿ ಮದುವೆಯಲ್ಲಿ ಭಾಗಿಯಾದರು.
Next Story





