ದ.ಕ.: 3 ಗಂಟೆ ವೇಳೆ 56.35 ಶೇ. ಮತದಾನ

ಮಂಗಳೂರು, ಮೇ 10: ರಾಜ್ಯ ವಿಧಾನಸಭೆಗೆ ಇಂದು ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆ ಬಹುತೇಕ ಶಾಂತಿಯುತವಾಗಿದ್ದು, ಅಪರಾಹ್ನ 3 ಗಂಟೆ ವೇಳೆ ದ.ಕ. ಜಿಲ್ಲೆಯಲ್ಲಿ ಒಟ್ಟು 56.35 ಶೇ. ಮತದಾನವಾಗಿದೆ.
ಪುತ್ತೂರಿನಲ್ಲಿ ಗರಿಷ್ಠ ಶೇ.61.45 ಮತದಾನವಾಗಿದೆ. ಮಂಗಳೂರು ದಕ್ಷಿಣದಲ್ಲಿ ಕನಿಷ್ಠ ಅಂದರೆ 49.29 ಶೇ. ಮತದಾನವಾಗಿದೆ.
ಬೆಳ್ತಂಗಡಿ ಶೇ.59.02, ಮೂಡುಬಿದಿರೆ ಶೇ.57.38, ಮಂಗಳೂರು ನಗರ ಉತ್ತರ ಶೇ.55.15, ಮಂಗಳೂರು ಶೇ.56.8, ಬಂಟ್ವಾಳ ಶೇ.53.26, ಸುಳ್ಯ ಶೇ.59.65ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗದ ವರದಿ ತಿಳಿಸಿದೆ.
Next Story