ಪಡುಬಿದ್ರೆ: ಮತದಾನದ ಬಳಿಕ 91 ವರ್ಷದ ಮರಿಯಮ್ಮ ನಿಧನ
ಪಡುಬಿದ್ರೆ : ಹೆಜಮಾಡಿಯ ಎನ್.ಎಸ್. ರೋಡ್ ನಿವಾಸಿ ವೀಲ್‌ಚಯರ್‌ನಲ್ಲಿ ಬಂದ 91 ವರ್ಷದ ಮರಿಯಮ್ಮ ಅವರು ಮತದಾನ ಮಾಡಿ ಮನೆಗೆ ತೆರಳಿದ ಕೆಲವೇ ಕ್ಷಣದಲ್ಲಿ ನಿಧನರಾದರು.
ಅವರು ತಮ್ಮ ಮಗನೊಂದಿಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತದಾನ ಕೇಂದ್ರಕ್ಕೆ ತೆರಳಿ ಮತದಾನ ಮಾಡಿದ್ದು, ಬಳಿಕ ಮನೆಗೆ ತೆರಳಿದ್ದರು.
ಮನೆಗೆ ತೆರಳಿ ಕೆಲವೇ ಕ್ಷಣದಲ್ಲಿ ಅವರು ನಿಧನರಾದರು ಎಂದು ತಿಳಿದುಬಂದಿದೆ. ಹಿರಿಯರಿಗೆ ಮನೆಯಲ್ಲಿಯೇ ಮತದಾನ ಮಾಡುವ ಅವಕಾಶ ಕಲ್ಪಿಸಲಾಗಿತ್ತು. ಆದರೆ ಸರಿಯಾದ ಮಾಹಿತಿ ಇಲ್ಲದೆ ಈ ಮಹಿಳೆಗೆ ಇದರ ಪ್ರಯೋಜನ ಪಡೆದುಕೊಳ್ಳಲು ಆಗಲಿಲ್ಲ. ಇಂತಹ ಮಾಹಿತಿ ಹಲವರಿಗೆ ಇರಲಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
Next Story