Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಭಾರತದ ಐತಿಹಾಸಿಕ ಉಪಗ್ರಹ ಚಿತ್ರಣ ಗೂಗಲ್...

ಭಾರತದ ಐತಿಹಾಸಿಕ ಉಪಗ್ರಹ ಚಿತ್ರಣ ಗೂಗಲ್ ಅರ್ಥ್ ನಿಂದ ಮಾಯ

10 May 2023 8:21 PM IST
share
ಭಾರತದ ಐತಿಹಾಸಿಕ ಉಪಗ್ರಹ ಚಿತ್ರಣ ಗೂಗಲ್ ಅರ್ಥ್ ನಿಂದ ಮಾಯ

ಹೊಸದಿಲ್ಲಿ, ಮೇ 10: ಕಳೆದ ಎರಡು ದಶಕಗಳಲ್ಲಿಯ ಭಾರತದ ಐತಿಹಾಸಿಕ ಉಪಗ್ರಹ ಚಿತ್ರಣವು ಗೂಗಲ್ ಅರ್ಥ್ನಿಂದ ಕಣ್ಮರೆಯಾಗಿದೆ. ಸ್ಥಳಾಕೃತಿ ವಿವರಣೆ, ಅರಣ್ಯ ಪ್ರದೇಶ, ನಗರೀಕರಣ ಮತ್ತು ಇತಿಹಾಸದಲ್ಲಿನ ಬದಲಾವಣೆಗಳ ಜಾಡು ಹಿಡಿಯಲು ಗೂಗಲ್ ಅರ್ಥ್ ಸೇವೆಯನ್ನು ನೆಚ್ಚಿಕೊಂಡಿರುವ ಹಲವಾರು ವಿದ್ವಾಂಸರು ಮತ್ತು ಸಂಶೋಧಕರು ಈ ವಿಷಯವನ್ನು ಗಮನಿಸಿದ್ದಾರೆ.

ಭಾರತದಲ್ಲಿಯ ಸ್ಥಳಗಳಿಗೆ 2020ರಿಂದ ಉಪಗ್ರಹ ಚಿತ್ರಣ ಮಾತ್ರ ಗೂಗಲ್ ಅರ್ಥ್ನಲ್ಲಿ ಲಭ್ಯವಿದೆ. ಅಮೃತಸರದ ಐತಿಹಾಸಿಕ ಉಪಗ್ರಹ ಚಿತ್ರಣಕ್ಕಾಗಿ ಹುಡುಕಾಡಿದ ಸಂದರ್ಭದಲ್ಲಿ ಅದು ಲಭ್ಯವಾಗಿರಲಿಲ್ಲ,ಆದರೆ ಸುಮಾರು 50 ಕಿ.ಮೀ.ದೂರದಲ್ಲಿರುವ ಪಾಕಿಸ್ತಾನದ ಲಾಹೋರಿನ ಕಳೆದ ಕೆಲವು ದಶಕಗಳ ಐತಿಹಾಸಿಕ ಉಪಗ್ರಹ ಚಿತ್ರಣ ಲಭ್ಯವಿದೆ.

‘ನಾವು ಗೂಗಲ್ ಅರ್ಥ್ ಪ್ರೋ 7ರ ಹಿಸ್ಟಾರಿಕ್ ಡೇಟಾಬೇಸ್ನಲ್ಲಿಯ ನಮ್ಮ ಕೆಲವು ಐತಿಹಾಸಿಕ ಚಿತ್ರಣಗಳನ್ನು ಮರುಸಂಸ್ಕರಿಸುತ್ತಿದ್ದೇವೆ ಮತ್ತು ಅವುಗಳನ್ನು ಈ ವರ್ಷದ ಉತ್ತರಾರ್ಧದಲ್ಲಿ ಮತ್ತೆ ಲಭ್ಯವಾಗಿಸಲು ಯೋಜಿಸಿದ್ದೇವೆ  ’ ಎಂದು ಗೂಗಲ್ನ ವಕ್ತಾರರೋರ್ವರು ಸುದ್ದಿಸಂಸ್ಥೆಗೆ ತಿಳಿಸಿದರು. ಆದರೆ ಈ ಡೇಟಾ ಕಣ್ಮರೆಯು ಭಾರತ ಸರಕಾರದ ನೀತಿ ಮಾನದಂಡಗಳಿಗೆ ಅಥವಾ ಆದೇಶಗಳೊಂದಿಗೆ ನಂಟು ಹೊಂದಿದೆಯೇ ಎಂಬ ಪ್ರಶ್ನೆಗೆ ಅವರು ಉತ್ತರಿಸಲಿಲ್ಲ.

‘ಈ ಕಣ್ಮರೆಯು ಕೇವಲ ಭಾರತಕ್ಕೆ ಅನ್ವಯಗೊಂಡಿರುವಂತಿದೆ. ಪಾಕಿಸ್ತಾನದಲ್ಲಿ ಐತಿಹಾಸಿಕ ಚಿತ್ರಣ ಈಗಲೂ ಲಭ್ಯವಿದೆ. ಈ ಬೇಸಿಗೆಯಲ್ಲಿ ನನ್ನ ಸಂಶೋಧನೆಯ ಕೆಲಸ ಕೈಗೊಳ್ಳಲು ನಾನು ಯೋಜಿಸಿದ್ದೆ. ವರ್ಷದಿಂದ ವರ್ಷಕ್ಕೆ ಚಿತ್ರಣವನ್ನು ಹೋಲಿಸುವುದು ನಿರ್ದಿಷ್ಟ ಸಮಯದಲ್ಲಿ ನಡೆದಾಡುತ್ತಿರುವಾಗ ಎಂದೂ ನೋಡಿರದ ವಿವರಗಳನ್ನು ನೋಡಲು ನನಗೆ ನೆರವಾಗುತ್ತದೆ. 2020ರ ಮೊದಲಿನ ನಿರ್ದಿಷ್ಟ ವರ್ಷಗಳ ಉಪಗ್ರಹ ಚಿತ್ರಣವು ಕೆಲವೊಮ್ಮೆ ಈಗ ಲಭ್ಯವಿರುವುದಕ್ಕಿಂತ ಬಹಳಷ್ಟು ಉತ್ತಮವಾಗಿತ್ತು’ ಎಂದು ಹೈದರಾಬಾದ್ನ ಇತಿಹಾಸ ಕುರಿತು ವ್ಯಾಪಕ ಸಂಶೋಧನೆಯನ್ನು ಮಾಡಿರುವ ಪೋರ್ಟರ್ವಿಲ್ಲೆ ಕಾಲೇಜಿನ ಮಾನವಶಾಸ್ತ್ರ ಪ್ರಾಧ್ಯಾಪಕ ರಾಬರ್ಟ್ ಸಿಂಪ್ಕಿನ್ಸ್ ಹೇಳಿದರು.

ಐತಿಹಾಸಿಕ ಉಪಗ್ರಹ ಚಿತ್ರಣವು ಭೂದೃಶ್ಯದಲ್ಲಿಯ ಬದಲಾವಣೆಗಳನ್ನು ಪತ್ತೆ ಹಚ್ಚಲು ನೆರವಾಗುತ್ತದೆ,ಹೀಗಾಗಿ ಅದು ಪ್ರಮುಖ ಸಂಪನ್ಮೂಲವಾಗಿದೆ. ಸರೋವರಗಳ ಕಣ್ಮರೆ,ಜಲಮೂಲಗಳ ಅತಿಕ್ರಮಣಗಳು ಮತ್ತು ಹೈದರಾಬಾದ್ನಲ್ಲಿಯ ಸಚಿವಾಲಯ ಕಟ್ಟಡದಂತಹ ನಾಗರಿಕ ಯೋಜನೆಗಳು ಅಥವಾ ದಿಲ್ಲಿಯಲ್ಲಿ ನೂತನ  ಸಂಸತ್ ಕಟ್ಟಡದ ನಿರ್ಮಾಣದಿಂದ ಆಗಿರುವ ಬದಲಾವಣೆಗಳನ್ನೂ ಐತಿಹಾಸಿಕ ದತ್ತಾಂಶದಲ್ಲಿ ಕಾಣಬಹುದು.

‘ನನ್ನ ಪ್ರದೇಶದಲ್ಲಿ 2000ರಿಂದಲೂ ಹೈ ರೆಸೊಲ್ಯೂಷನ್ ಚಿತ್ರಗಳು ಲಭ್ಯವಿದ್ದವು. ಈಗ ಅವೆಲ್ಲ ಕಣ್ಮರೆಯಾಗಿವೆ. ಅವರು ಉತ್ತಮ ಸ್ಪಷ್ಟತೆಗಾಗಿ ಅವುಗಳನ್ನು ಮರು ಸಂಸ್ಕರಿಸುತ್ತಿದ್ದರೆ ಅದು ಒಳ್ಳೆಯದು. ಆದರೆ ಸರಕಾರದ ಆದೇಶದಿಂದಾಗಿ ಅಥವಾ ನಾವು ನೋಡಬಾರದೆಂದು ಸರಕಾರವು ಬಯಸಿರುವ ಏನನ್ನೋ ಕೆಲವು ಹಳೆಯ ಚಿತ್ರಗಳು ತೋರಿಸುತ್ತವೆ ಎಂಬ ಕಾರಣದಿಂದಾಗಿ ಐತಿಹಾಸಿಕ ಚಿತ್ರಣವನ್ನು ಸಂಪೂರ್ಣವಾಗಿ ತೆಗೆದಿದ್ದರೆ ಅದು ನ್ಯಾಯೋಚಿತವಲ್ಲ ’ಎಂದು ಗೂಗಲ್ ಅರ್ಥ್ನ ಇನ್ನೋರ್ವ ಬಳಕೆದಾರರು ಹೇಳಿದರು.

share
Next Story
X