ಈಶಾನ್ಯದ ರಾಜ್ಯಗಳಲ್ಲಿ ಜಮೀನು ನಿರ್ವಹಣೆಗೆ ಕಾರ್ಯಪಡೆ

ಹೊಸದಿಲ್ಲಿ, ಮೇ 10: ಈಶಾನ್ಯದ ರಾಜ್ಯಗಳಲ್ಲಿ ಜಮೀನು ನಿರ್ವಹಣೆಗಾಗಿ ಕಾರ್ಯಪಡೆಯೊಂದನ್ನು ರಚಿಸಲಾಗುವುದು ಎಂದು ಕೇಂದ್ರ ಗ್ರಾಮೀಣ ಅಭಿವೃದ್ಧಿ ಸಚಿವಾಲಯದ ಬುಧವಾರ ತಿಳಿಸಿದೆ.
ಮೇ 3 ಮತ್ತು 4ರಂದು ಗುವಾಹಟಿಯಲ್ಲಿ ನಡೆದ ‘‘ಈಶಾನ್ಯದ ರಾಜ್ಯಗಳಲ್ಲಿ ಜಮೀನು ನಿರ್ವಹಣೆ’’ ಎಂಬ ವಿಷಯದ ಕುರಿತ ರಾಷ್ಟ್ರೀಯ ಸಮ್ಮೇಳನದಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ವಲಯದ ಅಭಿವೃದ್ಧಿಗಾಗಿ ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವುದು ಮತ್ತು ಆಧುನೀಕರಣಗೊಳಿಸುವುದು ಅಗತ್ಯವಾಗಿದೆ ಎಂಬ ಅಭಿಪ್ರಾಯವನ್ನು ಅಸ್ಸಾಮ್, ತ್ರಿಪುರಾ, ಮಿರೆರಮ್ ಮತ್ತು ಮೇಘಾಲಯ ರಾಜ್ಯಗಳ ಭೌಗೋಳಿಕ ಮತ್ತು ಸ್ವಾಯತ್ತ ಜಿಲ್ಲಾ ಮಂಡಳಿಗಳು ವ್ಯಕ್ತಪಡಿಸಿವೆ.
Next Story





