ಪೋಲ್ಯಾಂಡ್: ಚೂರಿ ಇರಿತದಲ್ಲಿಒಬ್ಬ ಮೃತ್ಯು; 9 ಮಂದಿಗೆ ಗಾಯ

ವಾರ್ಸಾ, ಮೇ 10: ಪೋಲ್ಯಾಂಡ್ನ ಅನಾಥಾಶ್ರಮಕ್ಕೆ ನುಗ್ಗಿದ ವ್ಯಕ್ತಿಯೊಬ್ಬ ಓರ್ವ ಯುವತಿಯನ್ನು ಚೂರಿಯಿಂದ ಇರಿದು ಹತ್ಯೆ ಮಾಡಿದ್ದು ಇತರ 9 ಮಂದಿಯನ್ನು ಗಾಯಗೊಳಿಸಿರುವುದಾಗಿ ವರದಿಯಾಗಿದೆ.
ಲಾಡ್ಜ್ ನಗರದಲ್ಲಿನ ಅನಾಥಾಶ್ರಮದಲ್ಲಿ ಮಂಗಳವಾರ ರಾತ್ರಿ ಈ ದುರ್ಘಟನೆ ನಡೆದಿದ್ದು ದಾಳಿಕೋರನನ್ನು ಪೊಲೀಸರು ಬಂಧಿಸಿದ್ದಾರೆ. ಚೂರಿ ಇರಿತದಿಂದ ಅನಾಥಾಶ್ರಮದ ವಾರ್ಡನ್ ಆಗಿದ್ದ 16 ವರ್ಷದ ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದು 9 ಮಂದಿ ಗಾಯಗೊಂಡಿದ್ದಾರೆ. ಗಂಭೀರ ಗಾಯಗೊಂಡಿದ್ದ 5 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಇಲಾಖೆಯ ವಕ್ತಾರೆ ಅನೆಟಾ ಸೊಬೈರಾಜ್ ಹೇಳಿದ್ದಾರೆ.
Next Story





