ವಿಧಾನಸಭಾ ಚುನಾವಣೆ: ಕಾರ್ಕಳ ಕ್ಷೇತ್ರದಲ್ಲಿ ಶೇ 81.30 ಮತದಾನ

ಕಾರ್ಕಳ: ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಕಾರ್ಕಳ ವಿಧಾನ ಸಭಾ ಕ್ಷೇತ್ರದಲ್ಲಿ ಶೇ 81.30 ಮತದಾನವಾಗಿದೆ.
ಕಾರ್ಕಳ ವಿಧಾನ ಸಭಾ ಕ್ಷೇತ್ರದಲ್ಲಿ 209 ಬೂತ್‌ಗಳಿದ್ದು, 91435 ಪುರುಷರಲ್ಲಿ73870 (80.78%) ಮತದಾನ ಮಾಡಿದರೆ, 99142 ಮಂದಿ ಮಹಿಳಾ ಮತದಾರರಲ್ಲಿ 81068 (81.76%)ಮಂದಿ ಮತದಾನ ಮಾಡಿದ್ದಾರೆ. ಒಟ್ಟು 190577 ಮತದಾರರಲ್ಲಿ 154938 ಮತದಾರರು ಮತ ಚಲಾಯಿಸಲಿದ್ದಾರೆ.
ಕ್ಷೇತ್ರದಲ್ಲಿ ಪುರುಷರಿಗಿಂತ ಮಹಿಳಾ ಮತದಾರರು ಹೆಚ್ಚಾಗಿದ್ದರೂ ಮತ ಚಲಾವಣೆಯಲ್ಲಿ 18074 ಮಂದಿ ಭಾವಹಿಸದೆ ಇರುವುದರಿಂದ ಶೇಕಡವಾರು ಮತದಾನದಲ್ಲಿ ಕುಸಿತ ಕಂಡುಬಂದಿದೆ. 91435 ಪುರುಷ ಮತದಾರರಲ್ಲಿ 73870 ಪುರುಷರು ಮತ ಚಲಾಯಿಸಿದರೆ 17565 ಮಂದಿ ಪುರುಷರು ಮತದಾನದಿಂದ ದೂರ ಉಳಿದರು.
ಬಿಸಿಲಿನ ತಾಪ ವಿಪರೀತ ಇರುವುದನ್ನು ಅರಿತ ಹೆಚ್ಚನ ಮತದಾರರು ಬೆಳಿಗ್ಗೆಯೇ ಮತದಾನ ಮಾಡಲು ಮತಗಟ್ಟೆಗಳಿಗೆ ಧಾವಿಸಿದ್ದರಿಂದ ಹೆಚ್ಚಿನ ಮತಗಟ್ಟೆಗಳಲ್ಲಿ ಸರಥಿ ಸಾಲು ಉದ್ದವಾಗಿ ಕಂಡುಬಂದಿತ್ತು.
ಈ ಸಾಲಿನ ಚುನಾವಣೆಗಾಗಿ ಮಹಿಳಾ ಮತಗಟ್ಟೆಯ ಅಧಿಕಾರಿಗಳಿಂದ ನಡೆಸುವ 5 ಸಖೀ ಮತಗಟ್ಟೆ, ವಿಶೇಷ ಚೇತನ ಅಧಿಕಾರಿಗಳಿಂದ ನಡೆಸಲಾಗುವ 1 ಪಿಡಬ್ಲ್ಯೂಡಿ ಮತಗಟ್ಟೆ, ಯುವ ಮತದಾರರ 1 ಮತಗಟ್ಟೆ, ಥೀಮ್ ಆಧಾರಿತ 1 ಮತಗಟ್ಟೆಗಳನ್ನು ಸ್ಥಾಪಿಸಿ ಅದನ್ನು ಸಿಂಗರಿಸಿ ವಿಶೇಷ ಮತಗಟ್ಟೆಯನ್ನಾಗಿ ಮಾಡಿರುವುದು ಮತದಾರರನ್ನು ಆಕರ್ಷಿಸಿತ್ತು. ಕುಕ್ಕುಂದೂರು ಟಪ್ಪಾಲು ಕಟ್ಟೆ ಸಮಾಜ ಮಂದಿರದ ಮತಗಟ್ಟೆಯನ್ನು ಶೃಂಗಾರ ಮಾಡಿ ಸಾಂಪ್ರದಾಯಿಕ ಮತಗಟ್ಟೆಯಾಗಿ ನಿರ್ಮಿಸಿಲಾಗಿತು.
ವಿಶೇಷ ಚೇತನ ಮತದಾರರಿಗಾಗಿ ಗಾಲಿ ಕುರ್ಚಿ, ಭೂತಕನ್ನಡಿ, ಬ್ರೈಲ್ ಲಿಪಿಯ ಮಾದರಿ ಮತಪತ್ರ, ಆದ್ಯತೆ ಮೇಲೆ ಪ್ರವೇಶ, ರ್‍ಯಾಂಪ್, ಕೋರಿಕೆ ಮೇರೆಗೆ ವಾಹನ ವ್ಯವಸ್ಥೆ ಸಿದ್ಧತೆ ಮಾಡಲಾಗಿತ್ತು.
ಮಿಯ್ಯಾರು ಮತಗಟ್ಟೆಯಲ್ಲಿ ಕೈಕೊಟ್ಟ ಮತಯಂತ್ರ: ಸಮಾಜಮಂದಿರ ಕುಂಟಿಬೈಲು ಮಿಯ್ಯಾರು ಮತಗಟ್ಟೆ ಯಲ್ಲಿ ಮತಯಂತ್ರ ಕೈಕೊಟ್ಟಿದ್ದರಿಂದ 1 ಗಂಟೆ ಕಾಲ ಮತದಾನ ವಿಳಂಬವಾಯಿತು. ಬೇಗ ಮತದಾನ ಮಾಡಿ ಕೆಲಸಕ್ಕೆ ತೆರಳಲೆಂದು ಬಂದ ಮತದಾರರು ಮತಯಂತ್ರ ಹಾಳಗಿದ್ದರಿಂದ ಮತದಾನ ಮಾಡದೆ ತೆರಳುವಂ ತಾಯಿತು. ಪ್ರಸಕ್ತ ಚುನಾವಣೆಯಲ್ಲಿ 209 ( 49 ಮೀಸಲು)ಬ್ಯಾಲೆಟ್ ಯುನಿಟ್, 209(49 ಮೀಸಲು) ಕಂಟ್ರೋಲ್ ಯುನಿಟ್, 279 ವಿವಿ ಪ್ಯಾಟ್ ಮತಯಂತ್ರಗಳನ್ನು ಚುನಾವಣೆಯಲ್ಲಿ ಬಳಸಲಾಗಿತ್ತು.
ಕಾರ್ಕಳ ಕಾಬೆಟ್ಟು ಸಮೀಪದ ಮಂಜುನಾಥ ಪೈ ಮೆಮೊರಿಯಲ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಂಪೂರ್ಣ ಭದ್ರತೆಯೊಂದಿಗೆ ಡಿ ಮಸ್ಟರಿಂಗ್ ಮಾಡಲಾಗಿದೆ.