ಇರಾನ್ನಲ್ಲಿ ಮತ್ತೆ 7 ಮಂದಿಗೆ ಗಲ್ಲು

ಟೆಹ್ರಾನ್, ಮೇ 10: ಇರಾನ್ನಲ್ಲಿ ಮಾದಕವಸ್ತು ಮತ್ತು ಅತ್ಯಾಚಾರ ಆರೋಪದಲ್ಲಿ ಮತ್ತೆ 7 ಮಂದಿಯನ್ನು ಗಲ್ಲಿಗೇರಿಸಲಾಗಿದೆ ಎಂದು ಮಾನವಹಕ್ಕುಗಳ ಸಂಘಟನೆ ಬುಧವಾರ ಹೇಳಿದೆ.
ರಾಜಧಾನಿ ಟೆಹ್ರಾನ್ನ ಹೊರವಲಯದಲ್ಲಿರುವ 2 ಜೈಲುಗಳ 7 ಕೈದಿಗಳನ್ನು ಗಲ್ಲಿಗೇರಿಸಲಾಗಿದೆ. ಕರಾಜ್ ನಗರದ ಘೆಝಾಲ್ ಹೆಸಾರ್ ಜೈಲಿನಲ್ಲಿ ಮಾದಕವಸ್ತು ಕುರಿತ ಪ್ರಕರಣದ ಮೂವರು ಕೈದಿಗಳಿಗೆ ಗಲ್ಲುಶಿಕ್ಷೆ ವಿಧಿಸಲಾಗಿದ್ದರೆ, ರಜಾಯ್ ಶಹರ್ ಜೈಲಿನಲ್ಲಿ ಇತರ 4 ಮಂದಿಯನ್ನು ಅತ್ಯಾಚಾರ ಪ್ರಕರಣದಲ್ಲಿ ಗಲ್ಲಿಗೇರಿಸಲಾಗಿದೆ ಎಂದು ಇರಾನ್ ಮಾನವಹಕ್ಕುಗಳ ಸಂಘಟನೆ ವರದಿ ಮಾಡಿದೆ.
ಇರಾನ್ನಲ್ಲಿ ಇತ್ತೀಚಿನ ದಿನಗಳಲ್ಲಿ ಭಯಾನಕ ಮರಣದಂಡನೆ ಪ್ರಕರಣ ಹೆಚ್ಚಿದೆ ಎಂದು ವಿಶ್ವಸಂಸ್ಥೆ ಮಂಗಳವಾರ ಕಳವಳ ವ್ಯಕ್ತಪಡಿಸಿದೆ. ಇರಾನ್ನಲ್ಲಿ ಕಳೆದ 12 ದಿನಗಳಲ್ಲಿ ಕನಿಷ್ಟ 64 ಮರಣದಂಡನೆ ಪ್ರಕರಣ ವರದಿಯಾಗಿದೆ ಎಂದು ಮಾನವ ಹಕ್ಕು ಸಂಘಟನೆ ವರದಿ ಮಾಡಿದೆ.
Next Story