ತಮಿಳುನಾಡು ಸಚಿವ ಸಂಪುಟ ಪುನಾರಚನೆ: ಪಳನಿವೇಲ್ ತ್ಯಾಗ ರಾಜನ್ ಕೈತಪ್ಪಿದ ಹಣಕಾಸು ಖಾತೆ

ಚೆನ್ನೈ: ತಮಿಳುನಾಡು ಸಚಿವ ಪಳನಿವೇಲ್ ತ್ಯಾಗ ರಾಜನ್ ಅವರು ಗುರುವಾರ ಹಣಕಾಸು ಹಾಗೂ ಮಾನವ ಸಂಪನ್ಮೂಲ ನಿರ್ವಹಣಾ ಖಾತೆಯನ್ನು ಕಳೆದುಕೊಂಡಿದ್ದು ಸಂಪುಟ ಪುನರ್ರಚನೆಯ ನಂತರ ಅವರು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಉಸ್ತುವಾರಿ ವಹಿಸಿದ್ದಾರೆ.
ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ) ಕ್ಯಾಬಿನೆಟ್‌ನಲ್ಲಿ ಪ್ರಮುಖ ಸಚಿವರಾಗಿದ್ದ ರಾಜನ್ ಅವರು ಎಂ.ಕೆ. ಸ್ಟಾಲಿನ್ ನೇತೃತ್ವದ ಸರಕಾರವನ್ನು ಟೀಕಿಸುವ ಹಾಗೂ ಭಾರತೀಯ ಜನತಾ ಪಕ್ಷವನ್ನು ಹೊಗಳಿದ ಎರಡು ಆಡಿಯೊ ಕ್ಲಿಪ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ನಂತರ ಕಳೆದ ತಿಂಗಳು ವಿವಾದಕ್ಕೆ ಸಿಲುಕಿದ್ದರು. ಆದರೆ, ಆಡಿಯೋ ತುಣುಕುಗಳು ನಕಲಿ ಎಂದು ರಾಜನ್ ಹೇಳಿದ್ದರು
ಈ ಹಿಂದೆ ರಾಜ್ಯ ಸರಕಾರದಲ್ಲಿ ಕೈಗಾರಿಕೆ ಸಚಿವರಾಗಿದ್ದ ತಂಗಂ ತೇನರಸು ಈಗ ಹಣಕಾಸು ಖಾತೆಯನ್ನು ವಹಿಸಿಕೊಳ್ಳಲಿದ್ದಾರೆ
ಹಣಕಾಸು ಖಾತೆಯನ್ನು ಹೊಂದಿದ್ದ ಕಳೆದ ಎರಡು ವರ್ಷಗಳು ತಮ್ಮ ಜೀವನದಲ್ಲಿ ಅತ್ಯಂತ ತೃಪ್ತಿಕರ ದಿನವಾಗಿದ್ದವು ಎಂದು ಟ್ವಿಟರ್‌ನಲ್ಲಿ ರಾಜನ್ ಹೇಳಿದ್ದಾರೆ.
Next Story





