ಇಟಲಿಯ ಮಿಲಾನ್ ನಗರದಲ್ಲಿ ಭಾರೀ ಸ್ಫೋಟ, ಹೊತ್ತಿ ಉರಿದ ಹಲವು ಕಾರುಗಳು

ಮಿಲಾನ್: ಉತ್ತರ ಇಟಲಿಯ ಮಿಲಾನ್ ನಗರದ ಕೇಂದ್ರ ಭಾಗದಲ್ಲಿ ಇಂದು ಸಂಭವಿಸಿದ ಭಾರೀ ಸ್ಫೋಟದಲ್ಲಿ ಹಲವು ಕಾರುಗಳಿಗೆ ಬೆಂಕಿ ಹತ್ತಿಕೊಂಡಿದೆ ಎಂದು ವರದಿಯಾಗಿದೆ. ಘಟನೆಯಲ್ಲಿ ಒಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ.
ಆಕ್ಸಿಜನ್ ಗ್ಯಾಸ್ ಕ್ಯಾನಿಸ್ಟರ್‌ಗಳನ್ನು ಸಾಗಾಟ ಮಾಡುತ್ತಿದ್ದ ವ್ಯಾನ್ ಒಂದರಲ್ಲಿ ಮೊದಲು ಸ್ಫೋಟ ಸಂಭವಿಸಿರಬೇಕು ಎಂದು ಶಂಕಿಸಲಾಗಿದೆ. ಮಿಲಾನ್‌ನ ಪೊರ್ಟಾ ರೊಮನಾ ಪ್ರದೇಶದಲ್ಲಿ ದಟ್ಟ ಹೊಗೆ ಆವರಿಸಿರುವುದು ಹಾಗೂ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಯತ್ನಿಸುತ್ತಿರುವ ದೃಶ್ಯಾವಳಿಗಳನ್ನು ಇಟಲಿಯ ಮಾಧ್ಯಮಗಳು ಪ್ರಸಾರ ಮಾಡಿವೆ.
ಕಾರುಗಳಿಗೆ ಹತ್ತಿಕೊಂಡಿದ್ದ ಬೆಂಕಿಯನ್ನು ನಂದಿಸಲಾಯಿತಾದರೂ ಹತ್ತಿರದ ಕಟ್ಟಡಗಳ ಕಿಟಿಕಿಗಳಿಂದ ಹೊಗೆ ಬರುತ್ತಿರುವುದು ಕಾಣಿಸುತ್ತದೆ.
ಘಟನೆಯ ನಂತರ ಹತ್ತಿರದ ಒಂದು ಪ್ರಾಥಮಿಕ ಶಾಲೆ ಹಾಗೂ ವಸತಿ ಕಟ್ಟಡದಲ್ಲಿದ್ದ ಜನರನ್ನು ತೆರವುಗೊಳಿಸಲಾಗಿದೆ ಎಂಬ ಮಾಹಿತಿಯಿದೆ.
An explosion occurred in the center of Milan, cars are on fire.
— 301 Military (@301military) May 11, 2023
According to preliminary information, a parked van exploded. pic.twitter.com/gSIBAYQZBu