ಹಾವು ಕಡಿದು ವೃದ್ಧೆ ಮೃತ್ಯು

ಮಡಿಕೇರಿ ಮೇ 11 : ಹಾವಿನ ಕಡಿತದಿಂದ ವೃದ್ಧೆಯೊಬ್ಬರು ಸಾವನ್ನಪ್ಪಿರುವ ಘಟನೆ ದಕ್ಷಿಣ ಕೊಡಗಿನ ಅತ್ತೂರು ಗ್ರಾಮದಲ್ಲಿ ಗುರುವಾರ ವರದಿಯಾಗಿದೆ.
ಗೋಣಿಕೊಪ್ಪ ಸಮೀಪದ ಅತ್ತೂರು ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕರಾದ, ಮೋಹನ್ ನೆಲ್ಲೂರಾಯ ಅವರ ತಾಯಿ ಶುಭಲಕ್ಷ್ಮೀ (68) ಎಂಬವರೇ ಮೃತಪಟ್ಟವರು ಎಂದು ತಿಳಿದು ಬಂದಿದೆ.
ಇಂದು ಬೆಳಗ್ಗೆ ಶುಭಲಕ್ಷ್ಮೀ ಅವರು ವಿಷ ಪೂರಿತ ಗರಗಸ ಮಂಡಲ ಹಾವಿನ ಕಡಿತಕ್ಕೆ ಒಳಗಾಗಿದ್ದು, ಅವರನ್ನು ಆಸ್ಪತ್ರೆಗೆ ಕೊಂಡೊಯ್ಯುವ ಹಂತದಲ್ಲಿ ಅವರು ಕೊನೆಯುಸಿರೆಳೆದಿರುವುದಾಗಿ ತಿಳಿದು ಬಂದಿದೆ.
Next Story





