ಬ್ರಿಟನ್ ನ ಖ್ಯಾತ ಸಾಹಿತಿ ಅಗಾಥಾ ಕ್ರಿಸ್ತಿಯ ಬರಹಕ್ಕೆ ಪ್ರೇರಣೆಯಾಗಿದ್ದ ದ್ವೀಪ ಮಾರಾಟಕ್ಕೆ

ಲಂಡನ್, ಮೇ 11: ಬ್ರಿಟನ್ ನ ಖ್ಯಾತ ಸಾಹಿತಿ ಅಗಾಥಾ ಕ್ರಿಸ್ತಿಯ ಬರವಣಿಗೆಗೆ ಪ್ರೇರಣೆಯಾಗಿದ್ದ ಸಣ್ಣ ದ್ವೀಪವನ್ನು ಮಾರಾಟಕ್ಕೆ ಇಡಲಾಗಿದೆ ಎಂದು ಸಿಎನ್ಎನ್ ವರದಿ ಮಾಡಿದೆ.
ಪತ್ತೇದಾರಿ ಕಾದಂಬರಿಯ ಮೂಲಕ ಪ್ರಸಿದ್ಧಿ ಪಡೆದಿದ್ದ ಕ್ರಿಸ್ತಿ ತನ್ನ ಎರಡು ಜನಪ್ರಿಯ ಕಾದಂಬರಿಗಳಾದ `ಆ್ಯಂಡ್ ದೆನ್ ದ್ಯಾರ್ ವ್ಯಾರ್ ನನ್' ಮತ್ತು `ಎವಿಲ್ ಅಂಡರ್ ದಿ ಸನ್' ಕೃತಿಗಳನ್ನು ಇಂಗ್ಲಂಡ್ ನ ಸೌತ್ ಡೆವೋನ್ ನ ಕರಾವಳಿ ತೀರದಲ್ಲಿರುವ ಬರ್ಗ್ ದ್ವೀಪದಲ್ಲಿ ರಚಿಸಿದ್ದರು. ಇದೀಗ ಈ ದ್ವೀಪವನ್ನು 18.9 ದಶಲಕ್ಷ ಡಾಲರ್ ಕನಿಷ್ಟ ಬಿಡ್ ಸೂಚಿಸಿ ಮಾರಾಟಕ್ಕೆ ಇಡಲಾಗಿದೆ ಎಂದು ವರದಿ ಹೇಳಿದೆ.
Next Story