ಇಟಲಿಯಲ್ಲಿ ಸ್ಫೋಟ: ಒಬ್ಬ ವ್ಯಕ್ತಿಗೆ ಗಾಯ

ಮಿಲಾನ್, ಮೇ 11: ಆಕ್ಸಿಜನ್ ಅನಿಲವನ್ನು ಸಾಗಿಸುತ್ತಿದ್ದ ವ್ಯಾನಿನಲ್ಲಿ ಸ್ಫೋಟ ಸಂಭವಿಸಿ ಒಬ್ಬ ವ್ಯಕ್ತಿ ಗಾಯಗೊಂಡಿರುವ ಘಟನೆ ಇಟಲಿಯ ಮಿಲಾನ್ ನಗರದಲ್ಲಿ ಗುರುವಾರ ಸಂಭವಿಸಿದೆ.
ಸ್ಫೋಟದ ತೀವ್ರತೆಯಿಂದ ಸಮೀಪದಲ್ಲಿದ್ದ ಹಲವು ವಾಹನಗಳು ಬೆಂಕಿ ಹತ್ತಿಕೊಂಡು ಉರಿದುಹೋಗಿವೆ. ಸ್ಫೋಟದಿಂದ ಒಬ್ಬ ವ್ಯಕ್ತಿ ಗಾಯಗೊಂಡಿದ್ದು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಫೋಟದಿಂದಾಗಿ ಸಮೀಪದ ಕಟ್ಟಡಕ್ಕೂ ಬೆಂಕಿ ತಗುಲಿದಾಗ ಕಟ್ಟಡದಲ್ಲಿದ್ದವರನ್ನು ಸ್ಥಳಾಂತರಿಸಲಾಗಿದೆ. ಈ ಪ್ರದೇಶದಲ್ಲಿರುವ ಶಾಲೆಯನ್ನು ಮುಚ್ಚಲಾಯಿತು.
ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ತಂಡದ ಕಾರ್ಯಾಚರಣೆಯಲ್ಲಿ ಬೆಂಕಿಯನ್ನು ನಿಯಂತ್ರಿಸಲಾಗಿದೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.
Next Story