ಜಪಾನ್ ನಲ್ಲಿ ಭೂಕಂಪ: 4 ಮಂದಿಗೆ ಗಾಯ

ಟೋಕಿಯೊ, ಮೇ 11: ಜಪಾನ್ ರಾಜಧಾನಿ ಟೋಕಿಯೊ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಗುರುವಾರ ಸಂಭವಿಸಿದ ಭೂಕಂಪದಲ್ಲಿ 4 ಮಂದಿ ಗಾಯಗೊಂಡಿದ್ದು, ಹಲವು ಕಟ್ಟಡಗಳಿಗೆ ಅಲ್ಪಪ್ರಮಾಣದ ಹಾನಿಯಾಗಿದೆ ಎಂದು ಜಪಾನ್ನ ಭೂಕಂಪಶಾಸ್ತ್ರ ಕೇಂದ್ರದ ವರದಿ ಹೇಳಿದೆ.
5.4 ತೀವ್ರತೆಯ ಭೂಕಂಪ ಟೋಕಿಯೋದ ಆಗ್ನೇಯದಲ್ಲಿರುವ ಚಿಬಾ ಪ್ರಾಂತದಲ್ಲಿ ಕೇಂದ್ರೀಕೃತಗೊಂಡಿತ್ತು. ಭೂಕಂಪದಿಂದ ಕೆಲಕ್ಷಣ ಭೂಮಿ ನಡುಗಿದ ಅನುಭವವಾಗಿ ಜನತೆ ಗಾಭರಿಗೊಂಡರು. ಆದರೆ ಯಾವುದೇ ಸುನಾಮಿ ಎಚ್ಚರಿಕೆ ನೀಡಲಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಭೂಕಂಪದ ಹಿನ್ನೆಲೆಯಲ್ಲಿ ಕೆಲವು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ ಅಥವಾ ವಿಳಂಬಿಸಲಾಗಿದೆ ಎಂದು ಜಪಾನ್ನ ಕ್ಯೋಡೊ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
Next Story