Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಯುವ ವೈದ್ಯೆಯ ದಾರುಣ ಸಾವಿಗೆ ಯಾರು

ಯುವ ವೈದ್ಯೆಯ ದಾರುಣ ಸಾವಿಗೆ ಯಾರು ಹೊಣೆ?

-ಸಬೀಹಾ ಫಾತಿಮಾ, ಮಂಗಳೂರು-ಸಬೀಹಾ ಫಾತಿಮಾ, ಮಂಗಳೂರು11 May 2023 6:48 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share

ಮಾನ್ಯರೇ,

ಕೇರಳದ ಯುವ ಡಾಕ್ಟರ್ ವಂದನಾ ದಾಸ್ ಕೊಲೆ ಆಘಾತವನ್ನುಂಟು ಮಾಡಿದೆ. ನಾಡಿನ ಜನರ ಆರೋಗ್ಯಕ್ಕೆ ಕೊಡುಗೆಯನ್ನು ನೀಡಬೇಕಾಗಿದ್ದ ಯುವಜೀವವೊಂದು ವ್ಯವಸ್ಥೆಯ ವೈಫಲ್ಯಕ್ಕೆ ತುತ್ತಾಗಿ ದಾರುಣ ಅಂತ್ಯ ಕಂಡಿದೆ.
ಸರಿಸುಮಾರು ಅದೇ ವಯಸ್ಸಿನ ಈಗ ತಾನೇ ಎಂಬಿಬಿಎಸ್ ಹೌಸ್ ಸರ್ಜನ್ ಮುಗಿಸಿರುವ ಡಾಕ್ಟರ್ ಓರ್ವಳ ತಾಯಿ ಆಗಿರುವ ನಾನು ಈ ವಂದನಾರ ಹೆತ್ತವರ ಈಗಿನ ಮನಸ್ಥಿತಿಯನ್ನು ಚೆನ್ನಾಗಿ ಅರ್ಥೈಸಬಲ್ಲೆ.

ಒಂದು ಕಾಲವಿತ್ತು ವೈದ್ಯರನ್ನು ಜೀವ ರಕ್ಷಕರು ಎಂದು ಜನರು ತಿಳಿಯುತ್ತಿದ್ದರು ಮತ್ತು ಗೌರವಿಸುತ್ತಿದ್ದರು. ಆದರೆ ವಿವಿಧ ರೀತಿಯ ಸಾಮಾಜಿಕ ಬದಲಾವಣೆಗಳು, ಲಾಬಿಗಳು, ಕಾರ್ಪೊರೇಟ್ ವ್ಯವಸ್ಥೆ ಈ ವೈದ್ಯ ವೃತ್ತಿಯ ಪಾವಿತ್ರಕ್ಕೂ ಕುತ್ತು ತಂದಿತು. ಇಂದು ಪ್ರತೀ ವಿಷಯಕ್ಕೂ ವೈದ್ಯರನ್ನು ತರಾಟೆಗೆ ತೆಗೆದುಕೊಳ್ಳುವುದು, ಆಸ್ಪತ್ರೆಯಲ್ಲಿ ವೈದ್ಯರ ಮೇಲೆ ಮತ್ತು ಇತರ ಸಿಬ್ಬಂದಿ ಮೇಲೆ ದಾಳಿಯನ್ನು ನಡೆಸುವುದು ಸರ್ವೇಸಾಮಾನ್ಯ ವಿಷಯವಾಗಿ ಬಿಟ್ಟಿದೆ.

ಎಂಬಿಬಿಎಸ್ ಕಲಿಕೆ ಎಂಬುದು ಸಣ್ಣ ವಿಷಯವಲ್ಲ. ಅದಕ್ಕಾಗಿ ಅಪಾರ ತ್ಯಾಗದ ಅಗತ್ಯವಿದೆ. ಈ ವಿದ್ಯಾರ್ಥಿಗಳು ತಮ್ಮ ಯವ್ವನದ ಅಮೂಲ್ಯ ಸಮಯವನ್ನು ಈ ಶಿಕ್ಷಣಕ್ಕಾಗಿ ಮುಡಿಪಾಗಿಡುತ್ತಾರೆ. ಮಾತ್ರವಲ್ಲ ರಾತ್ರಿ ಹಗಲು ಓದಿ, ರಾತ್ರಿ ಹಗಲು ಆಸ್ಪತ್ರೆಯಲ್ಲಿ ಕೆಲಸ ಮಾಡಿ ಈ ಡಿಗ್ರಿಯನ್ನು ಪಡೆಯುತ್ತಾರೆ. ಸರಿಯಾದ ನಿದ್ರೆ ಇಲ್ಲದೆ, ತಿನ್ನಲು ಸಿಗದ ದಿನ ರಾತ್ರಿಗಳೂ ಇವುಗಳಲ್ಲಿ ಒಳಗೊಂಡಿರುತ್ತವೆ.

ಇಂತಹ ವೈದ್ಯೆ ಹತ್ಯೆಯಾದದ್ದು ಯಾರ ಕೈಯಲ್ಲಿ? ಇದು ಇಲ್ಲಿ ಬಹಳ ಯೋಚಿಸಬೇಕಾದ ವಿಚಾರ. ಓರ್ವ ಮಾದಕ ವ್ಯಸನಿಗೆ ನಮ್ಮ ಯುವ ವೈದ್ಯೆಯನ್ನು ಬಲಿ ನೀಡಬೇಕಾಯಿತೆ?. ಈ ವ್ಯಕ್ತಿ ಪೊಲೀಸ್ ಕಸ್ಟಡಿಯಲ್ಲಿದ್ದು ಇಲ್ಲಿಗೆ ಕರೆತರಲಾಗಿತ್ತು ಎಂದು ಮಾಧ್ಯಮ ವರದಿ ಮಾಡುತ್ತಿದೆ. ಹಾಗಿದ್ದರೆ ಆ ವ್ಯಕ್ತಿಗೆ ಕೈಕೋಳಗಳನ್ನು ಏಕೆ ತೊಡಿಸಲಾಗಿರಲಿಲ್ಲ? ಮತ್ತು ಈ ಅಪರಾತ್ರಿಯಲ್ಲಿ ಇಂತಹ ಮಾದಕ ವ್ಯಸನಿಯನ್ನು ಶುಶ್ರೂಷಿಸಲು ಇಂತಹ ಯುವ ವೈದ್ಯೆಗೆ ವಹಿಸಿಕೊಟ್ಟದ್ದು ಎಷ್ಟರಮಟ್ಟಿಗೆ ಸರಿ?.

ಇದಕ್ಕೆ ಪರಿಹಾರವೆಂಬ ರೂಪದಲ್ಲಿ ಆಸ್ಪತ್ರೆಯಲ್ಲಿ ಆ ವ್ಯವಸ್ಥೆ ಮಾಡಬೇಕು, ಈ ವ್ಯವಸ್ಥೆ ಮಾಡಬೇಕು ಎಂದು ಹೇಳಬಹುದು. ಆದರೆ ಮೂಲಕ್ಕೆ ಮದ್ದು ಮಾಡದೆ ಯಾವ ವ್ಯವಸ್ಥೆಯನ್ನು ಮಾಡಿಯೂ ಏನು ಪ್ರಯೋಜನವಿಲ್ಲ. ಮಾದಕ ವ್ಯಸನದ ವಿರುದ್ಧ ಸೂಕ್ತ ಪರಿಹಾರ ಕಂಡುಕೊಳ್ಳದೆ ಹೋದರೆ ಇನ್ನಷ್ಟು ಇಂತಹ ದುರಂತಗಳನ್ನು ನಾವು ಎದುರು ನೋಡಬೇಕಾಗಿ ಬರಬಹುದು. ಆದುದರಿಂದ ಸರಕಾರವು ಬಾಯಿಗೆ ತೋಚಿದ್ದನ್ನು ಆಡದೆ ಸರಿಯಾದ ಪರಿಪಕ್ವ ತೀರ್ಮಾನವನ್ನು ಕೈಗೊಳ್ಳಬೇಕು. ಸಮಾನ ಮನಸ್ಕರೆಲ್ಲರೂ ಒಟ್ಟು ಸೇರಿ ಭಾರತವನ್ನು ಮಾದಕ ವ್ಯಸನ ಮುಕ್ತಗೊಳಿಸಲು ಮದ್ಯ ಮುಕ್ತಗೊಳಿಸಲು ಪಣತೊಡಬೇಕಾದುದು ಕಾಲದ ಬೇಡಿಕೆಯಾಗಿದೆ. ಇದರ ಹೊರತಾಗಿ ಇಂತಹ ದುರಂತಗಳಿಗೆ ಶಾಶ್ವತ ಪರಿಹಾರ ಖಂಡಿತ ಸಾಧ್ಯವಿಲ್ಲ.

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
-ಸಬೀಹಾ ಫಾತಿಮಾ, ಮಂಗಳೂರು
-ಸಬೀಹಾ ಫಾತಿಮಾ, ಮಂಗಳೂರು
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X