ಏಕನಾಥ್ ಶಿಂಧೆ ನೈತಿಕ ಆಧಾರದಲ್ಲಿ ಕನಸಿನಲ್ಲೂ ರಾಜೀನಾಮೆ ನೀಡಲಾರರು: ಅಜಿತ್ ಪವಾರ್

ಪುಣೆ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ವಿರುದ್ಧ ವಾಗ್ದಾಳಿ ನಡೆಸಿರುವ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕ ಅಜಿತ್ ಪವಾರ್ ಅವರು ರಾಜ್ಯದಲ್ಲಿ ಕಳೆದ ವರ್ಷದ ರಾಜಕೀಯ ಬಿಕ್ಕಟ್ಟಿನ ಕುರಿತು ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ನೈತಿಕ ಆಧಾರದ ಮೇಲೆ ಶಿಂಧೆ ಕನಸಿನಲ್ಲೂ ರಾಜೀನಾಮೆ ನೀಡಲಾರರು ಎಂದು ಶುಕ್ರವಾರ ಹೇಳಿದ್ದಾರೆ.
"ನೈತಿಕ ಆಧಾರದ ಮೇಲೆ ಹಾಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರಿಂದ ರಾಜೀನಾಮೆ ಕೇಳುವ ಅಗತ್ಯವಿಲ್ಲ. ಅವರು ತಮ್ಮ ಕನಸಿನಲ್ಲಿಯೂ ರಾಜೀನಾಮೆ ನೀಡುವುದಿಲ್ಲ ಎಂದು ನಮಗೆ ತಿಳಿದಿದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಪ್ರಸ್ತುತ ಜನರ ನಡುವೆ ಅಗಾಧ ವ್ಯತ್ಯಾಸವಿದೆ" ಎಂದು ಪವಾರ್ ವರದಿಗಾರರಿಗೆ ತಿಳಿಸಿದರು.
ಜುಲೈನಲ್ಲಿ ನಡೆಯಲಿರುವ ವಿಧಾನಸಭೆ ಅಧಿವೇಶನದಲ್ಲಿ 16 ಶಾಸಕರ ಅನರ್ಹತೆಯ ವಿಷಯದ ಬಗ್ಗೆ ವಿರೋಧ ಪಕ್ಷದ ಎಂವಿಎ ಮೈತ್ರಿಕೂಟ ಏನು ಮಾಡಬಹುದೆಂದು ಚರ್ಚಿಸಲಿದೆ”ಎಂದು ಅವರು ಹೇಳಿದರು.
Next Story





