ನ್ಯಾಯಾಲಯ, ಪೊಲೀಸರಿಗೆ ಪಾಸ್‍ಪೋರ್ಟ್ ಮುಟ್ಟುಗೋಲು ಅಧಿಕಾರವಿಲ್ಲ: ಹೈಕೋರ್ಟ್

ಬೆಂಗಳೂರು, ಮೇ 12: ನ್ಯಾಯಾಲಯಕ್ಕೆ ಹಾಗೂ ಪೊಲೀಸರಿಗೆ ಪಾಸ್‍ಪೋರ್ಟ್ ಮುಟ್ಟುಗೋಲು ಹಾಕಿಟ್ಟುಕೊಳ್ಳುವ ಯಾವುದೇ ರೀತಿಯ ಅಧಿಕಾರವಿಲ್ಲ ಎಂದು ಹೈಕೋರ್ಟ್ ಪ್ರಕರಣವೊಂದರ ವಿಚಾರಣೆ ವೇಳೆ ಸ್ಪಷ್ಟಪಡಿಸಿದೆ.
ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಜಪ್ತಿ ಮಾಡಿಕೊಂಡಿರುವ ತಮ್ಮ ಪಾಸ್‍ಪೋರ್ಟ್ ಅನ್ನು ಬಿಡುಗಡೆ ಮಾಡಲು ನಿರ್ದೇಶನ ಕೋರಿ ನಗರದ ಪ್ರವೀಣ್ ಸುರೇಂದ್ರನ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ಆದೇಶ ನೀಡಿದೆ.
ಪಾಸ್‍ಪೋರ್ಟ್ ಅನ್ನು ಅರ್ಜಿದಾರರಿಗೆ ಹಿಂದಿರುಗಿಸುವಂತೆ ವಿಚಾರಣಾ ಕೋರ್ಟ್‍ಗೆ ಆದೇಶಿಸಿರುವ ಪೀಠ ಅರ್ಜಿದಾರರು ತಮ್ಮ ವಿರುದ್ಧದ ಬಾಕಿ ಪ್ರಕರಣ ಇತ್ಯರ್ಥವಾಗುವವರೆಗೆ ದೇಶ ಬಿಟ್ಟುಹೋಗಬಾರದು ಎಂದೂ ಸ್ಪಷ್ಟಪಡಿಸಿದೆ.
Next Story





