ಸ್ನೇಹಿತೆಯನ್ನು ಕಾಕ್ ಪಿಟ್ ನಲ್ಲಿ ಕುಳ್ಳಿರಿಸಿದ ಪೈಲಟ್ 3 ತಿಂಗಳು ಅಮಾನತು
ಏರ್ ಇಂಡಿಯಾಗೆ 30 ಲಕ್ಷ ರೂ. ದಂಡ

ಏರ್ ಇಂಡಿಯಾಗೆ 30 ಲಕ್ಷ ರೂ. ದಂಡ
ಹೊಸದಿಲ್ಲಿ, ಮೇ 12: ಸ್ನೇಹಿತೆಯೊಬ್ಬಳನ್ನು ವಿಮಾನದ ಕಾಕ್ ಪಿಟ್ (ವಿಮಾನ ಚಾಲನೆ ಕೋಣೆ)ಗೆ ಕರೆದು ಕುಳ್ಳಿರಿಸಿದ ಆರೋಪ ಎದುರಿಸುತ್ತಿರುವ ಏರ್ ಇಂಡಿಯಾ ಪೈಲಟ್ ಒಬ್ಬರನ್ನು ನಾಗರಿಕ ವಾಯುಯಾನ ಮಹಾ ನಿರ್ದೇಶನಾಲಯ (DGCA)ವು ಮೂರು ತಿಂಗಳ ಅವಧಿಗೆ ಅಮಾನತುಗೊಳಿಸಿದೆ ಮತ್ತು ಏರ್ ಇಂಡಿಯಾಗೆ 30 ಲಕ್ಷ ರೂ. ದಂಡ ವಿಧಿಸಿದೆ.
ಫೆಬ್ರವರಿಯಲ್ಲಿ ದುಬೈಯಿಂದ ದಿಲ್ಲಿಗೆ ಬರುತ್ತಿದ್ದ ವಿಮಾನದಲ್ಲಿ ಈ ಘಟನೆ ನಡೆದಿತ್ತು.
‘‘ವಿಮಾನದ ನಿಯಂತ್ರಣವನ್ನು ಹೊಂದಿದ್ದ ಪೈಲಟ್ ಡಿಜಿಸಿಎ ನಿಯಮಗಳಿಗೆ ವಿರುದ್ಧವಾಗಿ ಅದೇ ವಿಮಾನದಲ್ಲಿ ಪ್ರಯಾಣಿಕೆಯಾಗಿ ಪ್ರಯಾಣಿಸುತ್ತಿದ್ದ ಕರ್ತವ್ಯನಿರತ ಏರ್ ಇಂಡಿಯಾ ಸಿಬ್ಬಂದಿಯೊಬ್ಬರಿಗೆ ಕಾಕ್ ಪಿಟ್ ಪ್ರವೇಶಿಸಲು ಅವಕಾಶ ನೀಡಿದರು’’ ಎಂದು ಡಿಜಿಸಿಎ ಹೇಳಿದೆ.
ಇದು ‘‘ಸುರಕ್ಷತಾ ನಿಯಮಗಳ ಉಲ್ಲಂಘನೆ’’ಯಾಗಿದ್ದರೂ ಏರ್ ಇಂಡಿಯಾವು ಸರಿಯಾದ ದಂಡನಾ ಕ್ರಮವನ್ನು ತೆಗೆದುಕೊಳ್ಳಲಿಲ್ಲ ಎಂದು ಅದು ಹೇಳಿದೆ.
Next Story





