ಹಾಸನ | ಕಾರಿಗೆ ಟಿಪ್ಪರ್ ಢಿಕ್ಕಿ: ಅತ್ತೆ-ಸೊಸೆ ಮೃತ್ಯು

ಹಾಸನ, ಮೇ 12: ದಾವಣೆಗೆರೆಯಿಂದ ಮನೆಯ ಗೃಹ ಪ್ರವೇಶ ಮುಗಿಸಿಕೊಂಡು ವಾಪಸ್ ಬರುವಾಗ ಟಿಪ್ಪರ್ ಲಾರಿಯೊಂದು ಓವರ್ ಟೇಕ್ ಮಾಡಲು ಹೋಗಿ ಚಲಿಸುತ್ತಿದ್ದ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ನಾಲ್ವರಲ್ಲಿ ಅತ್ತೆ ಮತ್ತು ಸೊಸೆ ಇಬ್ಬರು ಮತಪಟ್ಟ ಘಟನೆ ಚನ್ನಗಿರಿ ಬಳಿ ನಡೆದಿರುವುದು ವರದಿಯಾಗಿದೆ.
ಮೃತಪಟ್ಟವರನ್ನು ಬಾಳ್ಳು ಪೇಟೆಯ ಕಾಫಿ ಪ್ಲಾಂಟರ್ ಮತ್ತು ಸಹ್ಯಾದ್ರಿ ಥಿಯೇಟರ್ ಮಾಲಕರಾಗಿದ್ದ ಬಿ.ಎಸ್. ಗುರುನಾಥ್ ಅವರ ಪತ್ನಿ ಮೈತ್ರಿದೇವಿ (70) ಹಾಗೂ ಸೊಸೆ ಸೌಜನ್ಯ (48) ಎಂದು ಗುರುತಿಸಲಾಗಿದೆ.
ನಗರದ ಮಲ್ಲಿಗೆ ಹೊಟೇಲ್ ಬಳಿಯಿರುವ ಮನೆಯಲ್ಲಿ ವಾಸವಿರುವ ಬಿ.ಎಸ್. ಗುರುನಾಥ್ ಅವರ ಮಗಳ ಹೊಸ ಮನೆ ಗೃಹ ಪ್ರವೇಶಕ್ಕೆಂದು ಕಾರಿನಲ್ಲಿ ಹಾಸ ನದಿಂದ ದಾವಣಗೆರೆಗೆ ತೆರಳಿದ್ದ ರು ಎನ್ನಲಾಗಿದೆ. ಕಾರ್ಯಕ್ರಮ ಮುಗಿಸಿಕೊಂಡು ಹಾಸನಕ್ಕೆ ವಾಪಸ್ ತೆರಳುವಾಗ ಚನ್ನಗಿರಿ ಬಳಿ ಟಿಪ್ಪರ್‌ಲಾರಿ ವಾಹನದ ಚಾಲಕ ಅತೀ ವೇಗದಲ್ಲಿ ಓವರ್ ಟೇಕ್ ಮಾಡುವ ಅವಸರದಲ್ಲಿ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಕಾರು ಪಲ್ಟಿಯಾಗಿ ರಸ್ತೆಗೆ ಉರುಳಿದೆ. ಈ ವೇಳೆ ಕಾರಿನಲ್ಲಿ ಮುಂಭಾಗ ಕುಳಿತ್ತಿದ್ದ ಬಿ.ಎಸ್. ಗುರುನಾಥ್ ಹಾಗೂ ಪುತ್ರ ರಾಜೇಶ್ ಇಬ್ಬರೂ ಸೇಫ್ಟಿ ಬೆಲ್ಟ್ ಹಾಕಿಕೊಂಡಿದ್ದರು. ಇನ್ನು ಕಾರು ಚಾಲನೆ ಮಾಡುತ್ತಿದ್ದ ರಾಜೇಶ್ ಅವರಿಗೂ ಕೂಡ ಗಾಯಗಳಾಗಿವೆ. ಗುರುನಾಥ್ ಅವರಿಗೆ ಗಾಯಗಳಾಗಿದ್ದು, ಹಿಂಬದಿ ಕುಳಿತಿದ್ದ ಗುರುನಾಥ್ ಪತ್ನಿ ಮೈತ್ರಿದೇವಿ ಮತ್ತು ಸೊಸೆ ಸೌಜನ್ಯ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಮೃತರ ಅಂತ್ಯಸಂಸ್ಕಾರ ಬಾಳ್ಳುಪೇಟೆಯಲ್ಲಿರುವ ಅವರ ಕಾಫಿತೋಟದಲ್ಲಿ ಶುಕ್ರವಾರ ಸಂಜೆ ನಡೆಸಲಾಯಿತು ಎಂದು ಕುಟುಂಬ ಮೂಲಗಳು ತಿಳಿಸಿವೆ.







