ಮಣಿಪುರ: ಶಂಕಿತ ಉಗ್ರರೊಂದಿಗೆ ಗುಂಡಿನ ಕಾಳಗದಲ್ಲಿ ಪೊಲೀಸ್ ಕಮಾಂಡೊ ಸಾವು, ಐವರಿಗೆ ಗಾಯ

ಇಂಫಾಲ, ಮೇ 12: ಮಣಿಪುರದ ಬಿಷ್ಣುಪರ ಜಿಲ್ಲೆಯಲ್ಲಿ ಗುರುವಾರ ಶಂಕಿತ ಉಗ್ರರೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಓರ್ವ ಪೊಲೀಸ್ ಕಮಾಂಡೊ ಮೃತಪಟ್ಟಿದ್ದಾರೆ ಹಾಗೂ ಇತರ ಐವರು ಗಾಯಗೊಂಡಿದ್ದಾರೆ. ಜಿಲ್ಲೆಯ ಟ್ರೋಂಗ್ಲೋಬಿ ಗ್ರಾಮದಲ್ಲಿ ಪೊಲೀಸ್ ತಂಡ ಗಸ್ತು ನಡೆಸುತ್ತಿದ್ದಾಗ ಬೆಳಗ್ಗೆ 7 ಗಂಟೆಗೆ ಈ ಘಟನೆ ನಡೆದಿದೆ.
ಗುಂಡಿನ ಕಾಳಗದಲ್ಲಿ ಮೃತಪಟ್ಟ ಪೊಲೀಸ್ ಕಮಾಂಡೊವನ್ನು ಹೆಸ್ನಾಮ್ ಜಿತೇನ್ ಸಿಂಗ್ ಎಂದು ಗುರುತಿಸಲಾಗಿದೆ. ಶಂಕಿತ ಉಗ್ರರು ಬಂಡಾಯ ಗುಂಪಿನ ಸದಸ್ಯರಾಗಿರಬಹುದು ಎಂದು ನಂಬಲಾಗಿದೆ ಎಂದು ಮಣಿಪುರದ ಶಿಕ್ಷಣ ಸಚಿವ ಟಿ. ಬಸಂತ ಅವರು ಶುಕ್ರವಾರ ತಿಳಿಸಿದ್ದಾರೆ. ಆದರೆ, ಈ ದಾಳಿಯಲ್ಲಿ ಟೈಬಲ್ ಯುನೈಟೆಡ್ ವಾಲಂಟೀರ್ (ಟಿಯುವಿ) ಭಾಗಿಯಾಗಿದೆ ಎಂಬ ಮಣಿಪುರ ಸರಕಾರದ ಪ್ರತಿಪಾದನೆಯನ್ನು ಟಿಯುವಿ ನಿರಾಕರಿಸಿದೆ.
ಸೇನಾ ಸಿಬ್ಬಂದಿ ನಮ್ಮ ಮೇಲೆ ಗುಂಡು ಹಾರಿಸಿದರು. ನಾವು ಪ್ರತಿದಾಳಿ ನಡೆಸಿದೆವು ಎಂದು ಅದು ಆರೋಪಿಸಿದೆ.
Next Story





