ಸಿಬಿಎಸ್‌ಇ ಪರೀಕ್ಷೆ: ಕಣಚೂರು ಪಬ್ಲಿಕ್ ಸ್ಕೂಲ್ ಶೇ. 100 ಫಲಿತಾಂಶ

ಮಂಗಳೂರು, ಮೇ 12: ಕಣಚೂರು ಪಬ್ಲಿಕ್ ಸ್ಕೂಲ್ 10ನೇ ತರಗತಿ ಸಿಬಿಎಸ್‌ಇ ಪರೀಕ್ಷೆಯಲ್ಲಿ ಶೇ 100 ಫಲಿತಾಂಶವನ್ನು ದಾಖಲಿಸಿದೆ.
ಈ ಸಂಸ್ಥೆಯ 79 ವಿದ್ಯಾರ್ಥಿಗಳು ಮಾರ್ಚ್ 2023ರಲ್ಲಿ ಪರೀಕ್ಷೆಗೆ ಹಾಜರಾಗಿದ್ದು, ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆಯಾಗಿರುತ್ತಾರೆ. 21 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 29 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 22 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ ಹಾಗೂ 7 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾರೆ.
ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದವರು: ಮಿಸಾಮ್ ಆತಿರಾ ಖಾನ್, ಮುಹಮ್ಮದ್ ತೈಸೀರ್, ಹಲೀಮಾ ರಿಧಾ ಭಾನು, ಆಯ್ಶತ್ ಹಸೀಫಾ, ಮಹಮ್ಮದ್ ಸಫಾಫ್, ಆಯಿಷಾ ಲಮೀಶಾ, ಗ್ರೀಷ್ಮಾ, ಫಿದಾ ಫಾತಿಮಾ, ಶಿಮಾ ಅಫ್ರೀನ್, ಇಶ್ರಾ ಅಲಿಮಾ, ಆಯಿಷಾ ಆಲಿ, ಶಾಶ್ವತ್ ಶೆಟ್ಟಿ, ಸನಮ್ ಎ, ಮೂಸಾ ನಾಜಿಮ್, ಶೋಭಿತ್ ಗೌಡ. ಆರ್, ನಿಶ್ಚಲ್ ವಿ ಕೋಟ್ಯಾನ್, ಫಾತಿಮತುಲ್ ಫಲೀಲಾ, ಸಾರಾ ಅಬ್ದುಲ್ ಹಮೀದ್, ನಿಫಾ ಹನಿಯಾ, ನಿರ್ಮಲ್ ವಿ ಕೋಟ್ಯಾನ್, ಮಹಮ್ಮದ್ ಆದಿಲ್ ಶಾ. ಉತ್ತಮ ಫಲಿತಾಂಶ ದಾಖಲಿಸಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಸಂಸ್ಥೆಯ ಆಡಳಿತ ಮಂಡಳಿಯವರು, ಪ್ರಾಂಶುಪಾಲರು ಮತ್ತು ಶಾಲೆಯ ಸಿಬ್ಬಂದಿ ವರ್ಗ ಅಭಿನಂದಿಸಿದೆ.