Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಪೂರ್ವಾಗ್ರಹದ ವಿರುದ್ಧ ಸತ್ಯಾಗ್ರಹ

ಪೂರ್ವಾಗ್ರಹದ ವಿರುದ್ಧ ಸತ್ಯಾಗ್ರಹ

ರಾಜಾರಾಮ ತೋಳ್ಪಾಡಿರಾಜಾರಾಮ ತೋಳ್ಪಾಡಿ13 May 2023 4:32 AM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಪೂರ್ವಾಗ್ರಹದ ವಿರುದ್ಧ ಸತ್ಯಾಗ್ರಹ

ನಾವು ಇಂದು ಎದುರಿಸುತ್ತಿರುವ ಅತ್ಯಂತ ವಿನಾಶಕಾರಿಯಾದ ಪೂರ್ವಗ್ರಹ ಇಂದು ಜನಜನಿತವಾಗಿರುವ ಉಗ್ರರಾಷ್ಟ್ರವಾದದ ನೆಲೆಯಿಂದ ಮೂಡಿಬರುತ್ತದೆ. ರಾಷ್ಟ್ರವನ್ನು ಘನವಾದ ಅಧಿಕಾರಶಾಹಿಯ ನೆಲೆಯಲ್ಲಿ ಪರಿಕಲ್ಪಿಸಿ ಅದರ ಗಡಿರೇಖೆಗಳನ್ನು ದಾಟಲಾಗದ ಅಡ್ಡಗೋಡೆಗಳೆಂದು ಪ್ರತಿಪಾದಿಸುವ ಉಗ್ರರಾಷ್ಟ್ರವಾದ ತನ್ನ ಹಠಮಾರಿ ರಾಷ್ಟ್ರದ ಕಲ್ಪನೆಗೆ ಭಿನ್ನವಾದ ಎಲ್ಲಾ ವಿಚಾರಗಳನ್ನೂ, ಧೋರಣೆಗಳನ್ನೂ ಮತ್ತು ಸಮುದಾಯಗಳನ್ನು ವೈರಿಗಳೆಂಬಂತೆ ಬಣ್ಣಿಸುತ್ತದೆ ಮತ್ತು ಅವುಗಳನ್ನು ತಾತ್ವಿಕವಾಗಿ ಅಸಮರ್ಪಕವಾದ ಹಾಗೂ ಚಾರಿತ್ರಿಕವಾಗಿ ಅಸಂಬದ್ಧವಾದ ಪಡಿಯಚ್ಚುಗಳಲ್ಲಿ ನಿರೂಪಿಸುತ್ತದೆ. ಹಾಗೆ ಮಾಡುವ ಮೂಲಕ ಒಂದು ವಿಶಾಲವಾದ ಬಹುರೂಪಿ ಸಮಾಜವಾದ ಭಾರತವನ್ನು ಏಕಘನಾಕಾರದ ಕಾಲಸ್ತಂಭನಗೊಂಡ ಸಮಾಜವಾಗಿ ಅದು ಪರಿವರ್ತಿಸುತ್ತದೆ.

ಕಣ್ಣಿಗೆ ಕಾಣುವ ಅನಿಷ್ಟಗಳ ವಿರುದ್ಧ ಹೋರಾಟ ನಡೆಸುವುದು ದುಸ್ತರವಾದರೂ ಅಸಾಧ್ಯವಾದುದೇನೂ ಅಲ್ಲ. ಆದರೆ ಕಣ್ಣಿಗೆ ಕಾಣದೆ ಅನೇಕ ಸಾರಿ ನಮ್ಮೊಳಗೇ ಅವಿತು ಕುಳಿತಿರುವ ಅನಿಷ್ಟಗಳ ವಿರುದ್ಧ ಹೋರಾಟ ಅಸಾಧ್ಯವೆನ್ನಿಸುವಷ್ಟು ಕಠಿಣ. ಭಾರತವೆನ್ನುವ ಬಹುಸಂಸ್ಕೃತೀಯ ಶಿಲ್ಪವಿನ್ಯಾಸದ ಅವಿಭಾಜ್ಯ ಭಾಗವಾಗಿರುವ ನಾವು ತಲೆತಲಾಂತರದಿಂದ ಬೇರೆ ಬೇರೆ ತರಹದ ಸಂಕಟಗಳನ್ನು ಎದುರಿಸುತ್ತಾ ಬಂದಿದ್ದೇವೆ. ಬಡತನ, ಅಸಮಾನತೆ, ಭ್ರಷ್ಟಾಚಾರ, ಶೋಷಣೆ ಹಾಗೂ ಸಂಕುಚಿತತೆಗಳಂತಹ ಸಂಕಟಗಳ ವಿರುದ್ಧ ಹತಾಶ ಹೋರಾಟಗಳ ನಡುವೆ ಒಂದು ದಿನ ಈ ಸಂಕಟಗಳಿಗೆ ಕೊನೆ ಇರಬಹುದೆನ್ನುವ ವಿಶ್ವಾಸವನ್ನು ನಾವು ತಳೆಯಬಹುದು. ಆದರೆ ನಮ್ಮೊಳಗೆ ಅವಿತು ಕುಳಿತಿರುವ ಪೂರ್ವಗ್ರಹವೆನ್ನುವ ಪೀಡೆಯಿಂದ ನಮಗೆ ಮುಕ್ತಿ ಇದೆಯೇ ಎಂಬ ಪ್ರಶ್ನೆ ತೀರಾ ಸಂದಿಗ್ಧದ್ದು. ಪೂರ್ವಗ್ರಹದ ವಿರುದ್ಧದ ಹೋರಾಟ ಒಂದರ್ಥದಲ್ಲಿ ನಾವು ನಮ್ಮ ವಿರುದ್ಧವೇ ನಡೆಸುವ ಹೋರಾಟವಾಗಿದೆ. ನಮ್ಮೊಳಗಿರುವ ಪೂರ್ವಗ್ರಹವೆನ್ನುವ ಸೈತಾನನ್ನು ನಮ್ಮ ಆತ್ಮಶಕ್ತಿಯಿಂದ ಗೆಲ್ಲುವ ಈ ಪ್ರಯತ್ನ ನಾವು ಇಂದು ನಡೆಸಲೇಬೇಕಾದ ಅತಿ ಮುಖ್ಯವಾದ ಸತ್ಯಾಗ್ರಹ.

ಪೂರ್ವಗ್ರಹವೆಂದರೇನು, ಅದು ಉಂಟು ಮಾಡುವ ಪರಿಣಾಮಗಳೇನು ಹಾಗೂ ಅದರಿಂದ ಸಂಭವಿಸುವ ಅನಾಹುತಗಳೇನು ಎಂಬಿತ್ಯಾದಿ ಪ್ರಶ್ನೆಗಳನ್ನು ನಾವಿಂದು ಗಂಭೀರವಾಗಿ ಪರಿಗಣಿಸಬೇಕಾಗಿದೆ ಮತ್ತು ಅದರ ವಿರುದ್ಧ ನಿರಂತರವಾದ ಹೋರಾಟವನ್ನು ನಡೆಸಬೇಕಾದ ಸಂದರ್ಭದಲ್ಲಿ ನಾವು ಇಂದು ಇದ್ದೇವೆ. ಬೇರೆಬೇರೆ ಸಾಮಾಜಿಕ ಸನ್ನಿವೇಶಗಳಲ್ಲಿ ರೂಪುಗೊಂಡಿರುವ ನಾವು ಪರಸ್ಪರರ ಬಗ್ಗೆ ಕೆಲವು ನಿರ್ದಿಷ್ಟ ಬಗೆಯ ಪೂರ್ವಗ್ರಹಗಳನ್ನು ಇಟ್ಟುಕೊಂಡಿರುವುದು ಅಥವಾ ಬೆಳೆಸಿಕೊಂಡಿರುವುದರಲ್ಲಿ ಅಸಹಜವಾದುದೇನೂ ಇಲ್ಲ. ಅಂತೆಯೇ, ಈ ದೇಶದಲ್ಲಿ ವಿವಿಧ ಜಾತಿ ಹಾಗೂ ಸಮುದಾಯಗಳು ಪರಸ್ಪರರ ಬಗ್ಗೆ ಪೂರ್ವಗ್ರಹಗಳಿಂದ ಕೂಡಿದ ಸಂಬಂಧಗಳಲ್ಲಿ ರೂಪುಗೊಂಡಿವೆ. ನಾವು ಇಂದು ಅಸ್ಮಿತೆಗಳು ಎಂದು ಕರೆಯುವ ನಮ್ಮ ಸಾಮಾಜಿಕ, ಸಾಂಸ್ಕೃತಿಕ ರೂಪಗಳು ಈ ಬಗೆಯ ಪೂರ್ವಗ್ರಹಗಳಲ್ಲಿಯೇ ರಚಿತವಾಗಿವೆ. ಜಾತಿ, ಮತ, ಪಂಥ, ಧರ್ಮ, ದೇಶ-ಪ್ರದೇಶಗಳೆನ್ನುವ ವಿವಿಧ ಬಗೆಯ ಸಾಮುದಾಯಿಕ ಅಸ್ಮಿತೆಗಳು ನಾವು ಗುರುತಿಸಲು ಯತ್ನಿಸುವ ಮತ್ತು ಕೆಲವು ಸಂದರ್ಭಗಳಲ್ಲಿ ವಿರೋಧಿಸಬೇಕಾದ ಪೂರ್ವಗ್ರಹಗಳಿಂದ ಆವೃತವಾಗಿವೆ. ಹಾಗಾಗಿ ಅಸ್ಮಿತೆಗಳು ಇರುವ ತನಕ ಪೂರ್ವಗ್ರಹಗಳು ಇರುತ್ತವೆ. ಹಾಗಾದರೆ ಅಸ್ಮಿತೆಗಳಿಂದ ಕಳಚಿಕೊಳ್ಳುವ ಮೂಲಕವೇ ಪೂರ್ವಗ್ರಹಗಳಿಂದ ನಮಗೆ ಮುಕ್ತಿಯೇ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ.

ನಾವು ನಮ್ಮ ವಾಸ್ತವದ ಬದುಕಿನಲ್ಲಿ ಅಸ್ಮಿತೆಗಳನ್ನು ಧಿಕ್ಕರಿಸಲು ಸಾಧ್ಯವಿಲ್ಲ. ನಾವು ಹುಟ್ಟಿ ಬೆಳೆದ ಜಾತಿ, ಮತ, ಪಂಥಗಳು ನಮ್ಮ ವ್ಯಕ್ತಿತ್ವ ಮತ್ತು ವ್ಯವಹಾರಗಳನ್ನು ನಿರ್ದೇಶಿಸುತ್ತವೆ. ಅಂದರೆ ಮಾನವರಾದ ನಾವೆಲ್ಲರೂ ಬೇರೆಬೇರೆ ನೆಲೆಗಳಲ್ಲಿ ಕೆಲವೊಮ್ಮೆ ಆಪಾದಿತ ಮತ್ತೆ ಕೆಲವೊಮ್ಮೆ ಪ್ರಜ್ಞಾಪೂರ್ವಕ ಅಸ್ಮಿತೆಗಳ ಪಾಶಗಳಲ್ಲಿ ಬಂಧಿತರಾಗಿದ್ದೇವೆ. ಈ ಅರ್ಥದಲ್ಲಿ ನಮ್ಮ ಅಸ್ತಿತ್ವದ ಭಾಗವೇ ಆಗಿರುವ ಅಸ್ಮಿತೆಗಳನ್ನು ಧಿಕ್ಕರಿಸಿ ಬದುಕಬೇಕೆನ್ನುವುದು ಅಸಾಧ್ಯದ ಮಾತು. ಹಾಗಿದ್ದೂ ಮಾನವ ಅಸ್ಮಿತೆಗಳ ಸಂಕುಚಿತತೆಗಳ ಆಚೆಗಿನ ಸಮಾನ ಮಾನವತ್ವದ ಅಥವಾ ವಿಶ್ವ ಮಾನವನ ಆದರ್ಶವನ್ನು ನಾವು ಕಾಣುತ್ತಾ ಬಂದಿದ್ದೇವೆ. ಮಾನವನ ಬದುಕಿನಲ್ಲಿ ತಾನು ಬದುಕಿದ ಸಮಾಜ ಮತ್ತು ಸಂಸ್ಕೃತಿಯ ಚಹರೆಗಳು ಇರುವಂತೆಯೇ ಅದನ್ನು ದಾಟಿ ಒಂದಾಗಿ ಬದುಕುವ ಆಕಾಂಕ್ಷೆಯೂ ಜೊತೆಯಲ್ಲಿ ಇರುತ್ತದೆ. ಇವುಗಳ ನಡುವಿನ ದ್ವಂದ್ವದಲ್ಲಿಯೇ ಮಾನವನ ಬದುಕು ನಿರ್ವಹಿಸಲ್ಪಡುತ್ತದೆ.

ನಮ್ಮ ದೇಶದಲ್ಲಿ ವಿವಿಧ ಜನಸಮುದಾಯಗಳು ತಮ್ಮ ದಿನನಿತ್ಯದ ಬದುಕಿನ ಜಂಜಾಟಗಳಲ್ಲಿ ಪರಸ್ಪರರ ಕುರಿತು ಪೂರ್ವಗ್ರಹಗಳನ್ನು ಇರಿಸಿಕೊಂಡಿರುತ್ತವೆ ಎನ್ನುವುದನ್ನು ಈಗಾಗಲೇ ಹೇಳಿದ್ದೇವೆ. ಈ ಪೂರ್ವಗ್ರಹಗಳು ನಿರ್ದಿಷ್ಟ ಪಡಿಯಚ್ಚುಗಳಲ್ಲಿ ವ್ಯಕ್ತಗೊಂಡಿರುತ್ತವೆ. ಅವುಗಳು ಪೂರ್ತಿ ಸತ್ಯಗಳಲ್ಲದಿದ್ದರೂ ಅವುಗಳನ್ನು ಅಪ್ಪಟ ಸುಳ್ಳುಗಳೆಂದು ಹೇಳಲಾಗದು. ಜನಸಮುದಾಯಗಳ ಸಾಮಾಜಿಕ, ಸಾಂಸ್ಕೃತಿಕ ವಿನ್ಯಾಸಗಳು ಅವುಗಳ ರೀತಿ-ನೀತಿಗಳನ್ನು ನಿರೂಪಿಸುತ್ತವೆ. ಈ ರೀತಿ-ನೀತಿಗಳ ನೆಲೆಯಲ್ಲಿ ಸಾಮುದಾಯಿಕ ಅಸ್ಮಿತೆಗಳ  ಬಗೆಗಿನ ಪಡಿಯಚ್ಚು ನೋಟಗಳು ಸಿದ್ಧಗೊಳ್ಳುತ್ತವೆ. ಅನೇಕ ಸಂದರ್ಭಗಳಲ್ಲಿ ಈ ಪಡಿಯಚ್ಚು ನೋಟಗಳನ್ನು ನಾವು ವಿನಾಶಕಾರಿ ಎಂದು ಪರಿಗಣಿಸುವಂತಿಲ್ಲ. ಏಕೆಂದರೆ ಅವುಗಳು ತಲೆತಲಾಂತರಗಳಿಂದ ನಮ್ಮ ನಡುವೆ ಹಾಸ್ಯದ ಮಾತಾಗಿ ಅಥವಾ ನಂಜಿನ ನುಡಿಯಾಗಿ ಇವೆ. ಅವುಗಳಿಂದ ದೊಡ್ಡ ಮಟ್ಟದ ಹಾನಿಗಳಾಗಿಲ್ಲವಾದ್ದರಿಂದ ನಾವು ಅವುಗಳ ಕುರಿತು ಹೆಚ್ಚು ತಲೆಬಿಸಿ ಮಾಡಬೇಕಾಗಿಲ್ಲ. ಆದರೆ ಕಳೆದ ಕೆಲವು ದಶಕಗಳಿಂದ ಭಾರತೀಯ ಸಮಾಜದಲ್ಲಿ ಕೆಲವು ನಿರ್ದಿಷ್ಟ ಹಿತಾಸಕ್ತ ಶಕ್ತಿಗಳಿಂದ ಹಾಗೂ ನಿರ್ದಿಷ್ಟ ಸೈದ್ಧಾಂತಿಕ ವಿನ್ಯಾಸಗಳ ಮೂಲಕ ನಿರಂತರವಾಗಿ ಸಷ್ಟಿಯಾಗುತ್ತಿರುವ ಮತ್ತು ಮರುಸಷ್ಟಿಯಾಗುತ್ತಿರುವ ಪೂರ್ವಗ್ರಹಗಳ ಕುರಿತು ನಾವು ಸ್ಪಷ್ಟತೆ ಹೊಂದಿರಬೇಕಾಗುತ್ತದೆ ಹಾಗೂ ಅವುಗಳ ವಿರುದ್ಧ ಸತತ ಹೋರಾಟ ನಡೆಸಬೇಕಾಗುತ್ತದೆ.

ನಾವು ಇಂದು ಎದುರಿಸುತ್ತಿರುವ ಅತ್ಯಂತ ವಿನಾಶಕಾರಿಯಾದ ಪೂರ್ವಗ್ರಹ ಇಂದು ಜನಜನಿತವಾಗಿರುವ ಉಗ್ರರಾಷ್ಟ್ರವಾದದ ನೆಲೆಯಿಂದ ಮೂಡಿಬರುತ್ತದೆ. ರಾಷ್ಟ್ರವನ್ನು ಘನವಾದ ಅಧಿಕಾರಶಾಹಿಯ ನೆಲೆಯಲ್ಲಿ ಪರಿಕಲ್ಪಿಸಿ ಅದರ ಗಡಿರೇಖೆಗಳನ್ನು ದಾಟಲಾಗದ ಅಡ್ಡಗೋಡೆಗಳೆಂದು ಪ್ರತಿಪಾದಿಸುವ ಉಗ್ರರಾಷ್ಟ್ರವಾದ ತನ್ನ ಹಠಮಾರಿ ರಾಷ್ಟ್ರದ ಕಲ್ಪನೆಗೆ ಭಿನ್ನವಾದ ಎಲ್ಲಾ ವಿಚಾರಗಳನ್ನೂ, ಧೋರಣೆಗಳನ್ನೂ ಮತ್ತು ಸಮುದಾಯಗಳನ್ನು ವೈರಿಗಳೆಂಬಂತೆ ಬಣ್ಣಿಸುತ್ತದೆ ಮತ್ತು ಅವುಗಳನ್ನು ತಾತ್ವಿಕವಾಗಿ ಅಸಮರ್ಪಕವಾದ ಹಾಗೂ ಚಾರಿತ್ರಿಕವಾಗಿ ಅಸಂಬದ್ಧವಾದ ಪಡಿಯಚ್ಚುಗಳಲ್ಲಿ ನಿರೂಪಿಸುತ್ತದೆ. ಹಾಗೆ ಮಾಡುವ ಮೂಲಕ ಒಂದು ವಿಶಾಲವಾದ ಬಹುರೂಪಿ ಸಮಾಜವಾದ ಭಾರತವನ್ನು ಏಕಘನಾಕಾರದ ಕಾಲಸ್ತಂಭನಗೊಂಡ ಸಮಾಜವಾಗಿ ಅದು ಪರಿವರ್ತಿಸುತ್ತದೆ. ಅನ್ಯವನ್ನು ವೈರಿ ಎಂದು ಪರಿಗಣಿಸುವ ಅವುಗಳನ್ನು ಕಠೋರ ಪಡಿಯಚ್ಚುಗಳಲ್ಲಿ ಎರಕ ಹೊಯ್ಯುವ ಜನಾಂಗೀಯ ನೆಲೆಯ ಈ ಉಗ್ರರಾಷ್ಟ್ರವಾದಕ್ಕೆ ಸಾಂಸ್ಕೃತಿಕ ಅಸ್ಮಿತೆಗಳ ಕುರಿತು ಕಾಳಜಿಗಳಿಲ್ಲ. ಜನಸಮುದಾಯಗಳ ಸಹಜವಾದ ಜೀವನಕ್ರಮಗಳ ಬಗ್ಗೆ ಗೌರವವಿಲ್ಲ.

ಕಳೆದ ಕೆಲವು ದಶಕಗಳಲ್ಲಿ ಮುಸ್ಲಿಮರನ್ನು, ಅಲ್ಪಸಂಖ್ಯಾಕರನ್ನು, ಗುಡ್ಡಗಾಡಿನ ಸಮುದಾಯಗಳನ್ನು ಹಾಗೂ ದಲಿತರನ್ನು ಎರಡನೆಯ ದರ್ಜೆಯ ನಾಗರಿಕರೆಂದೂ ಪರಿಗಣಿಸದ ಈ ರಾಷ್ಟ್ರವಾದ ಜನಮಾನಸದಲ್ಲಿ ಪೂರ್ವಗ್ರಹದ ವಿಷ ಬೀಜಗಳನ್ನು ಬಿತ್ತುತ್ತಿದೆ ಮತ್ತು ಈ ವಿಷ ಬೀಜ ಅಮಾನುಷವಾದ ಹಿಂಸೆಯನ್ನು ಮತ್ತು ಕಲ್ಪಿಸಿಕೊಳ್ಳಲಾಗದ ಕ್ರೌರ್ಯವನ್ನು ಜನಸಮುದಾಯದ ಮೇಲೆ ಎಸಗುತ್ತಾ ಬಂದಿದೆ. ತಾನು ಹಿಂದೂ ಎಂದು ಪರಿಗಣಿಸುವ ಪಂಥಕ್ಕೆ ಸೇರದ ಸಮುದಾಯಗಳ ಕುರಿತು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾ ಹೊಟ್ಟೆಪಾಡಿಗಾಗಿ ಅವರು ನಿರ್ವಹಿಸುವ ಕೆಲಸಗಳನ್ನು ದೇಶದ್ರೋಹವೆಂದು ಬಣ್ಣಿಸುವ ಮತ್ತು ಅವರನ್ನು ಖಳನಾಯಕರೆಂದು ಚಿತ್ರಿಸುವ ಕೆಲಸವನ್ನು ಈ ವಿನಾಶಕಾರಿ ರಾಷ್ಟ್ರವಾದ ರಾಷ್ಟ್ರ ರಕ್ಷಣೆಯ ಹೆಸರಿನಲ್ಲಿ ನಡೆಸುತ್ತಿದೆ.

ನಮ್ಮ ದಿನನಿತ್ಯದ ಬದುಕಿನಲ್ಲಿ ಇತರರ ಕುರಿತು ನಾವು ತಳೆಯುವ ಪೂರ್ವಗ್ರಹಗಳು ಒಂದು ಕಡೆಯಾದರೆ ಇಂದಿನ ನಮ್ಮ ರಾಷ್ಟ್ರವಾದದ ಅಟ್ಟಹಾಸದಲ್ಲಿ ಸಮುದಾಯಗಳ ಬಗ್ಗೆ ನಾವು ಹಿತಾಸಕ್ತ ಶಕ್ತಿಗಳ ಮಾರ್ಗದರ್ಶನದಲ್ಲಿ ತಳೆಯುವ ಪೂರ್ವಗ್ರಹಗಳು ಮತ್ತು ಮಾಡುವ ಹಿಂಸೆ ಇನ್ನೊಂದು ಕಡೆ. ಬಹುಷಃ, ಇಂದಿನ ನಮ್ಮ ಸೈದ್ಧಾಂತಿಕ ವಿನ್ಯಾಸಗಳಲ್ಲಿ ರಚಿತಗೊಂಡ ಪೂರ್ವಗ್ರಹಗಳನ್ನು, ನಾವು ದುರಗ್ರಹಗಳು ಎಂದು ಪರಿಗಣಿಸಿ ಅವುಗಳ ವಿರುದ್ಧ ನಿರಂತರ ಸತ್ಯಾಗ್ರಹವನ್ನು ನಡೆಸಬೇಕು. ಅದು ಒಂದು ಅರ್ಥದಲ್ಲಿ ನಮ್ಮ ಇಂದಿನ ಸಾಮಾಜಿಕ ಮನಸ್ಥಿತಿಯ ವಿರುದ್ಧ ನಡೆಸುವ ಸತ್ಯಾಗ್ರಹವೇ ಆಗಿದೆ. ನಮ್ಮ ದೇಶದ ಮಹಾನ್ ನಾಯಕ ಗಾಂಧೀಜಿಯವರು ಹೇಳುವಂತೆ ಈ ಹೋರಾಟ ಅಂತಃಸ್ಸಾಕ್ಷಿಯ ಕರೆಗೆ ಓಗೊಟ್ಟು ನಮ್ಮೊಳಗಿನ ದುಷ್ಟತನದ ವಿರುದ್ಧ ನಾವು ನಡೆಸುವ ಹೋರಾಟ.

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
ರಾಜಾರಾಮ ತೋಳ್ಪಾಡಿ
ರಾಜಾರಾಮ ತೋಳ್ಪಾಡಿ
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X