ಎಸೆಸೆಲ್ಸಿ: ಬಂಟ್ವಾಳ ತೌಹೀದ್ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಉತ್ತಮ ಫಲಿತಾಂಶ

ಬಂಟ್ವಾಳ: ಬಂಟ್ವಾಳ-ಕೆಳಗಿನಪೇಟೆ ತೌಹೀದ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯು 2022-23ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ.99.1 ಫಲಿತಾಂಶ ಪಡೆದಿದೆ.
ಪರೀಕ್ಷೆ ಬರೆದ 113 ವಿದ್ಯಾರ್ಥಿಗಳ ಪೈಕಿ 12 ಮಂದಿ ವಿಶಿಷ್ಟ ಶ್ರೇಣಿ, 85 ಮಂದಿ ಪ್ರಥಮ ದರ್ಜೆ ಹಾಗೂ 15 ಮಂದಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಆಯಿಷಾ ರಶಾ 595(95.2 ಶೇ.), ಅಲೀಫಾ ಮರ್ಯಮ್ 585(93.5 ಶೇ.), ಮುಹಮ್ಮದ್ ಸಿನಾನ್ 570 (91.2 ಶೇ.) ಅಂಕ ಗಳಿಸಿ ಶಾಲೆಯಲ್ಲಿ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಗಳಿಸಿದ್ದಾರೆ.
Next Story





