ಮಂಗಳೂರು: 6ನೇ ಸುತ್ತಿನ ಎಣಿಕೆ ಪೂರ್ಣ: ಯು.ಟಿ.ಖಾದರ್ ಮುನ್ನಡೆ 15,246 ಮತಗಳಿಗೆ ಏರಿಕೆ

ಮಂಗಳೂರು, ಮೇ 13: ಮಂಗಳೂರು ವಿಧಾನಸಭಾ ಕ್ಷೇತ್ರದ 6ನೇ ಸುತ್ತಿನ ಮತ ಎಣಿಕೆ ಪೂರ್ಣಗೊಂಡಿದ್ದು, ಮಾಜಿ ಸಚಿವ, ಕಾಂಗ್ರೆಸ್ ಅಭ್ಯರ್ಥಿ ಯು.ಟಿ.ಖಾದರ್ ಮುನ್ನಡೆ ಸಾಧಿಸಿದ್ದಾರೆ.
ಅವರು ತಮ್ಮ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಸತೀಶ್ ಕುಂಪಲರಿಗಿಂತ 15,246 ಮತಗಳ ಅಂತರ ಕಾಯ್ದುಕೊಂಡಿದ್ದಾರೆ.
ಯು.ಟಿ.ಖಾದರ್ 35,494 ಮತಗಳನ್ನು ಗಳಿಸಿದ್ದರೆ, ಸತೀಶ್ ಕುಂಪಲ 20,248 ಮತಗಳನ್ನು ಗಳಿಸಿದ್ದಾರೆ. ಮತ ಎಣಿಕೆ ಮುಂದುವರಿದಿದೆ.
Next Story





