ಬಂಟ್ವಾಳ: ಹಾಲಿ ಶಾಸಕ ರಾಜೇಶ್ ನಾಯ್ಕ್ ಗೆ ಗೆಲುವು

ಬಂಟ್ವಾಳ: ತೀವ್ರ ಪೈಪೋಟಿಯ ಕಣವಾಗಿದ್ದ ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿಯ ರಾಜೇಶ್ ನಾಯ್ಕ್ ಉಳಿಪಾಡಿ ಎರಡನೇ ಬಾರಿಗೆ ಗೆಲುವು ಸಾಧಿಸಿದ್ದಾರೆ. ಜಿಲ್ಲೆಯ ಪ್ರಭಾವಿ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಬಿ.ರಮಾನಾಥ ರೈ ಸೋಲು ಒಪ್ಪಿಕೊಂಡಿದ್ದಾರೆ. ರಾಜೇಶ್ ನಾಯ್ಕ್ ಅವರ ಗೆಲುವಿನ ಅಂತರ 8,282 ಮತಗಳು.
ರಾಜೇಶ್ ನಾಯ್ಕ್ 93,324 ಮತಗಳನ್ನು ಗಳಿಸಿದರೆ, ರಮಾನಾಥ ರೈ 85,042 ಮತಗಳನ್ನು ಗಳಿಸಿ ಸೋಲೊಪ್ಪಿಕೊಂಡಿದ್ದಾರೆ.
2013ರಲ್ಲಿ ರಮಾನಾಥ ರೈ ವಿರುದ್ಧ ಸ್ಪರ್ಧೆಗೆ ಇಳಿದಿದ್ದ ಬಿಜೆಪಿಯ ರಾಜೇಶ್ ನಾಯಕ್ ಸೋಲುಂಡಿದ್ದರು. 2018ರಲ್ಲಿ ರಮಾನಾಥ ರೈ ವಿರುದ್ಧ ಗೆದ್ದ ರಾಜೇಶ್ ನಾಯಕ್, ಈ ಬಾರಿಯ ಚುನಾವಣೆಯಲ್ಲೂ ಗೆಲುವಿನ ನಗೆ ಬೀರಿದ್ದಾರೆ. ರಾಜೇಶ್ ನಾಯ್ಕ್ ಅವರ ಕಳೆದ ಬಾರಿಯ ಗೆಲುವಿನ ಅಂತರ 15,700 ಮತಗಳಾಗಿತ್ತು. ಈ ಬಾರಿ ಗೆಲುವಿನ ಅಂತರ ತಗ್ಗಿದೆ.
9 ಬಾರಿ ಸ್ಪರ್ಧೆ ಮಾಡಿದ್ದ ರಮಾನಾಥ ರೈ 6 ಬಾರಿ ಗೆದ್ದಿದ್ದರು. ಇದು ನನ್ನ ಕೊನೆಯ ಚುನಾವಣೆ ಎಂದಿದ್ದರೂ ಕೂಡ ಮತದಾರರು ರಮಾನಾಥ ರೈಯ ಕೈ ಹಿಡಿಯಲಿಲ್ಲ.
Next Story