ಸಿಬಿಎಸ್‌ಸಿ ಪರೀಕ್ಷೆ : ಅಲ್ ಫುರ್ಖಾನ್ ಇಸ್ಲಾಮಿಕ್ ಆಂಗ್ಲ ಮಾಧ್ಯಮ ಶಾಲೆಗೆ ಶೇ. 100 ಫಲಿತಾಂಶ

ಮೂಡಬಿದ್ರೆ: ನಗರದ ಅಲ್ ಫುರ್ಖಾನ್ ಇಸ್ಲಾಮಿಕ್ ಆಂಗ್ಲ ಮಾಧ್ಯಮ ಶಾಲೆ ಈ ವರ್ಷದ ಸಿ.ಬಿ.ಎಸ್.ಸಿ ಪರೀಕ್ಷೆಯಲ್ಲಿ ನೂರಕ್ಕೆ 100 ಫಲಿತಾಂಶ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದೆ.
ಪರೀಕ್ಷೆಗೆ ಕುಳಿತ 63 ವಿದ್ಯಾರ್ಥಿಗಳಲ್ಲಿ 30 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 29 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ 4 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಮುಹಮ್ಮದ್ ಶಮ್ರಾಝ್ (ಶೇ 93.2%) ಶಾಲೆಗೆ ಪ್ರಥಮ, ಮುಹಮ್ಮದ್ ನಿಹಾಲ್ ಮುನೀರ್ (ಶೇ.92.8%), ಹಾಗೂ ಸಾದ್ ಝುಬೈರ್ (ಶೇ. 928%) ಅಂಕ ಪಡೆದು ಶಾಲೆಗೆ ದ್ವಿತೀಯ ಸ್ಥಾನ ಹಂಚಿಕೊಂಡಿದ್ದಾರೆ.
ಅಲ್ಲದೆ ಕುರ್‌ಆನ್ ಸಂಪೂರ್ಣ ಕಂಠಪಾಠ ಮಾಡಿದ ಖದೀಜ ಬಿಲಾಲ್ (ಶೇ 89%), ಮುಹಮ್ಮದ್ ಪಾಯಿಕ್ ಬಾಜಿ (ಶೇ. 88.2), ಇಬ್ರಾಹಿಂ (ಶೇ. 86.8), ಖೈಸ್ ಬಿನ್ ಝುಬೈರ್ (ಶೇ. 76.2), ಕ್ವಾನಿತ್ ಇಕ್ಬಾಲ್ (ಶೇ. 59.4) ವಿಶಿಷ್ಟ ಸಾಧನೆಗೈದಿರುತ್ತಾರೆ.
ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಮುಹಮ್ಮದ್ ಶಮೀರ್, ನಿರ್ದೇಶಕರಾದ ಮುಮ್ತಾಝ್, ಆಡಳಿತ ಮಂಡಳಿ ಸದಸ್ಯರು, ಪ್ರಾಂಶುಪಾಲರು, ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.