ಮಂಗಳೂರು: ಮಾದಕ ವಸ್ತು ಎಂಡಿಎಂಎ ಸಹಿತ ಇಬ್ಬರ ಬಂಧನ

ಮಂಗಳೂರು: ನಿಷೇಧಿತ ಮಾದಕ ವಸ್ತು ಎಂಡಿಎಂಎ ಸಹಿತ ಇಬ್ಬರನ್ನು ಕಾವೂರು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಬಂಧಿತರನ್ನು ಇಮ್ರಾನ್ ಮತ್ತು ರಮೀಝ್ ಎಂದು ಗುರುತಿಸಲಾಗಿದೆ.
ಪಡುಶೆಡ್ಡೆ ರೈಲ್ವೆ ಅಂಡರ್‌ಪಾಸ್ ಬಲಭಾಗದಲ್ಲಿ ಮರವೂರು ರೈಲ್ವೆ ಬ್ರಿಡ್ಜ್ ಕಡೆಗೆ ಹೋಗುವ ಮಣ್ಣು ರಸ್ತೆಯ ಪಕ್ಕದಲ್ಲಿ ಆರೋಪಿಗಳು ಎಂಡಿಎಂಎಯನ್ನು ಮಾರಾಟ ಮಾಡಲು ಗಿರಾಕಿಗಳಿಗಾಗಿ ಕಾಯುತ್ತಿದ್ದರು ಎಂದು ದೂರಲಾಗಿದ್ದು, ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ 09.36 ಗ್ರಾಂ ತೂಕದ ಅಂದಾಜು 27000 ರೂ. ಮೌಲ್ಯದ ಎಂಡಿಎಂಎ, ಸ್ಕೂಟರ್‌ನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
Next Story