ತಾಲಿಬಾನ್ ಅಧಿಕಾರಿಗಳನ್ನು ಭೇಟಿಯಾದ ಖತರ್ ಪ್ರಧಾನಿ

ಕಾಬೂಲ್, ಮೇ 13: ಖತರ್ ಪ್ರಧಾನಿ ಹಾಗೂ ವಿದೇಶಾಂಗ ಸಚಿವ ಶೇಖ್ ಮುಹಮ್ಮದ್ ಬಿನ್ ಅಬ್ದುಲ್ ರಹಮಾನ್ ಅಲ್ಥಾನಿ ಶುಕ್ರವಾರ ಅಫ್ಘಾನ್ ಗೆ ಆಗಮಿಸಿದ್ದು ತಾಲಿಬಾನ್ ಅಧಿಕಾರಿಗಳನ್ನು ಭೇಟಿಯಾಗಿದ್ದಾರೆ ಎಂದು `ಟೋಲೊ ನ್ಯೂಸ್' ವರದಿ ಮಾಡಿದೆ.
ಅಫ್ಘಾನ್ ಪ್ರಧಾನಿ ಮುಹಮ್ಮದ್ ಹಸನ್ ಅಖುಂಡ್ ಜತೆಗಿನ ಭೇಟಿಯಲ್ಲಿ ಉಭಯ ದೇಶಗಳ ನಡುವಿನ ಸಂಬಂಧದ ಬಲವರ್ಧನೆಯ ಜತೆ ವಿಶ್ವಾಸ ಬೆಳೆಸುವ ಕ್ರಮಗಳ ಬಗ್ಗೆ, ಅಫ್ಘಾನಿಸ್ತಾನದ ಶೈಕ್ಷಣಿಕ, ಆರೋಗ್ಯ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಪ್ರಾಯೋಗಿಕ ಸಹಕಾರದ ಬಗ್ಗೆ ಚರ್ಚಿಸಲಾಗಿದೆ. ಖತರ್ನ ಭದ್ರತಾ ವಿಭಾಗದ ಮುಖ್ಯಸ್ಥ ಅಬ್ದುಲ್ಲಾ ಅಲ್-ಕುಲಾಯ್ಫಿ ಅಫ್ಘಾನ್ ಗೆ ಭೇಟಿ ನೀಡಿದ ಖತರ್ ನಿಯೋಗದಲ್ಲಿದ್ದರು ಎಂದು ತಾಲಿಬಾನ್ ವಕ್ತಾರ ಝಬೀಯುಲ್ಲಾ ಮುಜಾಹಿದ್ ಟ್ವೀಟ್ ಮಾಡಿದ್ದಾರೆ.
Next Story





