ಕಾಂಗ್ರೆಸ್ ನೀಡಿರುವ ಸುಳ್ಳು ಭರವಸೆಗಳು ಬಿಜೆಪಿ ಸೋಲಿಗೆ ಕಾರಣ: ಹರೀಶ್ ಪೂಂಜಾ

ಮಂಗಳೂರು: ಕಾಂಗ್ರೆಸ್ ನೀಡಿರುವ ಸುಳ್ಳು ಭರವಸೆಗಳ ಪರಿಣಾಮ ಬಿಜೆಪಿಗೆ ಸೋಲಾಗಿದೆ. ಕಾಂಗ್ರೆಸ್‌ನವರಿಗೆ ತಾವು ನೀಡಿರುವ ಭರವಸೆಗಳನ್ನು ಈಡೇರಿಸಲು ಸಾಧ್ಯವಿಲ್ಲ. ಮುಂದೆ ಇದಕ್ಕೆ ತಕ್ಕ ಬೆಲೆಯನ್ನು ಕಾಂಗ್ರೆಸ್ ತೆರಬೇಕಾಗುತ್ತದೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹೇಳಿದ್ದಾರೆ.
ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಿಂದ ಸತತ ಎರಡನೇ ಬಾರಿ ರಾಜ್ಯ ವಿಧಾನ ಸಭೆಗೆ ಆಯ್ಕೆಯಾಗಿರುವ ಪೂಂಜಾ ಅವರು ಕಾಂಗ್ರೆಸ್ ನೀಡಿರುವ ಭರವಸೆಗಳನ್ನು ಈಡೇರಿಸದಿದ್ದರೆ ಜವಾಬ್ದಾರಿಯುತ ಪ್ರತಿಪಕ್ಷ ಸ್ಥಾನದಲ್ಲಿರುವ ಬಿಜೆಪಿ ಹೋರಾಟ ನಡೆಸಲಿದೆ ಎಂದರು.
ಕಾರ್ಯಕರ್ತರ ಶ್ರಮ ಮತ್ತು ಮತದಾರರು ತಮ್ಮ ಮೇಲೆ ಇಟ್ಟಿರುವ ವಿಶ್ವಾಸ ತಮಗೆ ಭಾರೀ ಅಂತರದಲ್ಲಿ ಜಯ ಗಳಿಸಲು ಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟಿರುವ ಅವರು ಗೆಲುವಿಗೆ ನೆರವಾದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.
Next Story





