ಬಿಜೆಪಿಯ ಹಣಬಲ, ತೋಳ್ಬಲಕ್ಕೆ ಕರ್ನಾಟಕದ ತಿರಸ್ಕಾರ: ಪಿ.ಚಿದಂಬರಂ

ಹೊಸದಿಲ್ಲಿ,ಮೇ 13: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನ ಜಯಭೇರಿಯ ಹಿನ್ನೆಲೆಯಲ್ಲಿ ‘ನಿರ್ಣಾಯಕ ತೀರ್ಪು’ ನೀಡಿರುವುದಕ್ಕಾಗಿ ರಾಜ್ಯದ ಜನತೆಯನ್ನು ಅಭಿನಂದಿಸಿರುವ ಪಕ್ಷದ ಹಿರಿಯ ನಾಯಕ ಪಿ.ಚಿದಂಬರಂ,ತಥಾಕಥಿತ ಡಬಲ್ ಇಂಜಿನ್ ಸರಕಾರದ ಹಣಬಲ ಮತ್ತು ತೋಳ್ಬಲವನ್ನು ಜನರು ತಿರಸ್ಕರಿಸಿದ್ದಾರೆ ಎಂದು ಹೇಳಿದ್ದಾರೆ.
‘ಈ ಚುನಾವಣೆಯು ಒಂದು ರಾಜ್ಯದ ವಿಧಾನಸಭಾ ಚುನಾವಣೆಗಿಂತ ಹೆಚ್ಚಿನದಾಗಿತ್ತು. ಅದು ಭಾರತೀಯ ಸಂವಿಧಾನದ ಮೂಲಭೂತ ಮೌಲ್ಯಗಳನ್ನು ಎತ್ತಿ ಹಿಡಿಯುವ ಮತ್ತು ಪರಮಾಧಿಕಾರ ಸಿದ್ಧಾಂತಗಳು,ತಾರತಮ್ಯ ಮತ್ತು ಪೂರ್ವಾಗ್ರಹದಿಂದ ಉಂಟಾಗಿರುವ ಹಾನಿಯನ್ನು ತಡೆಯುವ ಕುರಿತಾಗಿತ್ತು. ನಿರ್ಣಾಯಕ ತೀರ್ಪು ನೀಡಿದ್ದಕ್ಕಾಗಿ ಕರ್ನಾಟಕದ ಜನತೆಗೆ ಕೃತಜ್ಞತೆಗಳು ’ ಎಂದು ಚಿದಂಬರಂ ಟ್ವೀಟಿಸಿದ್ದಾರೆ.
Next Story





