ವಿಧಾನಸಭೆ ಪ್ರವೇಶಿಸಿದ 8 ಮಂದಿ ಮಹಿಳೆಯರು

ಬೆಂಗಳೂರು, ಮೇ 13: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಐದು, ಬಿಜೆಪಿಯಿಂದ ಮೂರು ಹಾಗೂ ಜೆಡಿಎಸ್ ಪಕ್ಷದಿಂದ ಓರ್ವ ಮಹಿಳಾ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.
ಲಕ್ಷ್ಮಿ ಹೆಬ್ಬಾಳ್ಕರ್(ಕಾಂಗ್ರೆಸ್)-ಬೆಳಗಾವಿ ಗ್ರಾಮೀಣ, ಕನೀಝ್ ಫಾತಿಮಾ(ಕಾಂಗ್ರೆಸ್)-ಗುಲ್ಬರ್ಗ ಉತ್ತರ, ರೂಪ ಕಲಾ ಎಂ.(ಕಾಂಗ್ರೆಸ್)-ಕೆಜಿಎಫ್, ಮಂಜುಳಾ ಅರವಿಂದ ಲಿಂಬಾವಳಿ(ಬಿಜೆಪಿ)-ಮಹದೇವಪುರ, ನಯನಾ ಮೋಟಮ್ಮ(ಕಾಂಗ್ರೆಸ್)-ಮೂಡಿಗೆರೆ, ಶಶಿಕಲಾ ಜೊಲ್ಲೆ(ಬಿಜೆಪಿ)-ನಿಪ್ಪಾಣಿ, ಶಿವಮೊಗ್ಗ ಗ್ರಾಮೀಣ(ಜೆಡಿಎಸ್)-ಶಾರದಾ ಪೂರ್ಯನಾಯ್ಕ್ ಹಾಗೂ ಭಗೀರತಿ ಮುರುಳ್ಯ(ಬಿಜೆಪಿ)-ಸುಳ್ಯ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ.
ಈ ಪೈಕಿ ಮಂಜುಳಾ ಅರವಿಂದ ಲಿಂಬಾವಳಿ, ನಯನಾ ಮೋಟಮ್ಮ ಹಾಗೂ ಭಗೀರತಿ ಮುರುಳ್ಯ ಅವರು ಇದೇ ಮೊದಲ ಬಾರಿ ವಿಧಾನಸಭೆ ಪ್ರವೇಶಿಸುತ್ತಿದ್ದಾರೆ.
Next Story