ಸಿದ್ದರಾಮಯ್ಯ ನನಗೆ ಸಹಕಾರ ಕೊಡುವ ವಿಶ್ವಾಸ ಇದೆ: ಸಿಎಂ ಆಯ್ಕೆ ಬಗ್ಗೆ ಡಿಕೆಶಿ ಪ್ರತಿಕ್ರಿಯೆ

ಬೆಂಗಳೂರು: ಇಂದು (ಮೇ15) ಸಂಜೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ನೂತನ ಮುಖ್ಯಮಂತ್ರಿ ಆಯ್ಕೆ ಸಾಧ್ಯತೆ ಇದ್ದು, ಗೆದ್ದ ಕಾಂಗ್ರೆಸ್ ಶಾಸಕರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.
ಮುಖ್ಯಮಂತ್ರಿ ಆಯ್ಕೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, 'ಮುಖ್ಯಮಂತ್ರಿ ಯಾರೇ ಆದರೂ ಕಾಂಗ್ರೆಸ್ ನವರೇ ಆಗೋದು. ಸಿಎಂ ಕುರ್ಚಿ ಬಗ್ಗೆ ಯಾವುದೇ ಕುತೂಹಲ ಬೇಡ. ಎಲ್ಲಿ ಶ್ರಮ ಇದೆಯೋ ಅಲ್ಲಿ ಫಲ ಇದೆ' ಎಂದು ಹೇಳಿದರು.
'ಕೆಲವರು ಸಿದ್ದರಾಮಯ್ಯ ಜೊತೆ ನನಗೆ ಭಿನ್ನಾಭಿಪ್ರಾಯವಿದೆ ಎಂದು ಹೇಳುತ್ತಿದ್ದಾರೆ. ಆದರೆ ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಸ್ಪಷ್ಟಪಡಿಸುತ್ತೇನೆ. ಹಲವು ಬಾರಿ ಪಕ್ಷಕ್ಕಾಗಿ ತ್ಯಾಗ ಮಾಡಿ ಸಿದ್ದರಾಮಯ್ಯ ಜೊತೆ ನಿಂತಿದ್ದೇನೆ. ಸಿದ್ದರಾಮಯ್ಯಗೆ ಸಹಕಾರ ನೀಡಿದ್ದೇನೆ' ಎಂದರು.
'ನಾನು ಕೆಪಿಸಿಸಿ ಅಧ್ಯಕ್ಷನಾದ ಬಳಿಕ ಸರಿಯಾಗಿ ನಿದ್ದೆಯೇ ಮಾಡಿಲ್ಲ. ತುಂಬಾ ಶ್ರಮಪಟ್ಟಿದ್ದೇನೆ. ಎಲ್ಲಿ ಭಕ್ತಿ ಇದೆಯೋ ಅಲ್ಲಿ ಭಗವಂತ ಇದ್ದಾನೆ. ನಾನು ನಂಬಿದಂತಹ ಶಕ್ತಿ ನನ್ನ ಜೊತೆಗಿದೆ' ಎಂದು ಹೇಳಿದರು.





