ಚುನಾವಣೆ ಗೆಲ್ಲಲು ಉತ್ತಮ ಆಡಳಿತ ಬೇಕೇ ಹೊರತು ಡಬಲ್ ಇಂಜಿನ್ ಸರಕಾರವಲ್ಲ: ನವೀನ್ ಪಟ್ನಾಯಕ್

ಭುವನೇಶ್ವರ: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸೋತಿರುವ ಬಿಜೆಪಿ ವಿರುದ್ಧ ಬಿಜೆಡಿ ಅಧ್ಯಕ್ಷ ಹಾಗೂ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ (Naveen Patnaik ) ಶನಿವಾರ ವಾಗ್ದಾಳಿ ನಡೆಸಿದ್ದು, ಉತ್ತಮ ಆಡಳಿತವೇ ಪಕ್ಷಕ್ಕೆ ಚುನಾವಣೆ ಗೆಲ್ಲಲು ನೆರವಾಗುತ್ತದೆ ಹೊರತು 'ಡಬಲ್ ಇಂಜಿನ್' ಸರಕಾರವಲ್ಲ ಎಂದು ಹೇಳಿದ್ದಾರೆ.
ಶನಿವಾರ ನಡೆದ ಝಾರ್ಸುಗುಡ ಉಪಚುನಾವಣೆಯಲ್ಲಿ ತನ್ನ ಪಕ್ಷದ ಅಭ್ಯರ್ಥಿಯ ಗೆಲುವಿನ ನಂತರ ಬಿಜೆಡಿಯ ಸಂಭ್ರಮಾಚರಣೆಯ ವೇಳೆ ಪಟ್ನಾಯಕ್ ಈ ಹೇಳಿಕೆ ನೀಡಿದರು.
ಯಾವುದೇ ಪಕ್ಷದ ಹೆಸರನ್ನು ಹೇಳದ ಪಟ್ನಾಯಕ್, "ಸಿಂಗಲ್ ಇಂಜಿನ್ ಅಥವಾ ಡಬಲ್ ಎಂಜಿನ್ ಒಂದು ವಿಚಾರವೇ ಅಲ್ಲ.. ಜನರ ದೃಷ್ಟಿಕೋನದಿಂದ ಆಡಳಿತ ಮುಖ್ಯ. ಉತ್ತಮ ಆಡಳಿತ ಹಾಗೂ ಜನಪರ ಆಡಳಿತ ಯಾವಾಗಲೂ ಗೆಲ್ಲುತ್ತದೆ" ಎಂದು ಹೇಳಿದರು.
ಕರ್ನಾಟಕದಲ್ಲಿ ಬಿಜೆಪಿ 'ಡಬಲ್ ಇಂಜಿನ್' (ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರ) ಸರಕಾರ ಬರಲಿದೆ ಎಂದು ಘೋಷಣೆ ಮಾಡಿತ್ತು.
Next Story





