ISC 12ನೇ, ICSE 10ನೇ ತರಗತಿಯ ಫಲಿತಾಂಶ ಪ್ರಕಟ

ಹೊಸದಿಲ್ಲಿ: ಹೊಸದಿಲ್ಲಿಯ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ ಕೌನ್ಸಿಲ್(CISCE) ಇಂದು ISC (12 ನೇ ತರಗತಿ) ಹಾಗೂ ICSE (10 ನೇ ತರಗತಿ) ಪರೀಕ್ಷೆಗಳ ಫಲಿತಾಂಶಗಳನ್ನು ಪ್ರಕಟಿಸಿದೆ.
ಮಧ್ಯಾಹ್ನ 3 ಗಂಟೆಗೆ ಫಲಿತಾಂಶದ ಲಿಂಕ್ ಅನ್ನು ಸಕ್ರಿಯಗೊಳಿಸಲಾಗಿದೆ. ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು ಅಧಿಕೃತ ವೆಬ್‌ಸೈಟ್ ಗಳಾದ cisce.org, results.cisce.org. ಪರಿಶೀಲಿಸಲು ಸಾಧ್ಯವಾಗಲಿದೆ
ಐಸಿಎಸ್‌ಇ ಪರೀಕ್ಷೆಗಳು ಫೆಬ್ರವರಿ 27 ರಿಂದ ಮಾರ್ಚ್ 29 ರವರೆಗೆ ನಡೆದಿದ್ದರೆ, ಐಎಸ್‌ಸಿ 2023 ಪರೀಕ್ಷೆಗಳು ಫೆಬ್ರವರಿ 13 ರಿಂದ ಮಾರ್ಚ್ 31 ರವರೆಗೆ ನಡೆದಿದ್ದವು. ಪರೀಕ್ಷೆಗಳು ಮೂರು ಗಂಟೆಗಳ ಕಾಲ ನಡೆದವು, ಅದರಲ್ಲಿ ಪ್ರಶ್ನೆ ಪತ್ರಿಕೆಯನ್ನು ಓದಲು ವಿದ್ಯಾರ್ಥಿಗಳಿಗೆ ಹೆಚ್ಚುವರಿ 15 ನಿಮಿಷಗಳನ್ನು ನಿಗದಿಪಡಿಸಲಾಗಿದೆ.
Next Story





