ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ ರಾಜೀನಾಮೆ

ಬೆಂಗಳೂರು, ಮೇ 14: ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿರುವ ಬೆನ್ನಲ್ಲೇ ಅಡ್ವೊಕೇಟ್ ಜನರಲ್(ಎ.ಜಿ.) ಪ್ರಭುಲಿಂಗ ಕೆ. ನಾವದಗಿ ರಾಜೀನಾಮೆ ನೀಡಿದ್ದಾರೆ.
ರಾಜಭವನಕ್ಕೆ ತೆರಳಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ನಾವದಗಿ ರವಿವಾರ ರಾಜೀನಾಮೆ ನೀಡಿದರು.
ಪ್ರಭುಲಿಂಗ ನಾವದಗಿ 2018ರ ಮೇ 18ರಂದು ರಾಜ್ಯದ ಅಡ್ವೊಕೇಟ್ ಜನರಲ್ ಆಗಿ ನೇಮಕಗೊಂಡಿದ್ದರು. 2018ಕ್ಕೂ ಮುನ್ನ ಮಧುಸೂದನ್ ನಾಯಕ್ ಅವರು ಅಡ್ವೊಕೇಟ್ ಜನರಲ್ ಆಗಿದ್ದರು. ಆ ನಂತರ ಉದಯ್ ಹೊಳ್ಳ ಅವರು ಅಡ್ವೊಕೇಟ್ ಜನರಲ್ ಆಗಿದ್ದರು. ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್, ಕಾಂಗ್ರೆಸ್ ಸರಕಾರ 2019ರಲ್ಲಿ ಪತನಗೊಂಡ ನಂತರ ಅವರೂ ರಾಜೀನಾಮೆ ನೀಡಿದ್ದರು.
Next Story





