ಐಪಿಎಲ್: ರಾಜಸ್ಥಾನ ವಿರುದ್ಧ ಆರ್‌ಸಿಬಿಗೆ ಭರ್ಜರಿ ಜಯ
ಜೈಪುರ, ಮೇ 14: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧ ರವಿವಾರ ನಡೆದ ಐಪಿಎಲ್‌ನ 60ನೇ ಪಂದ್ಯದಲ್ಲಿ 112 ರನ್‌ಗಳ ಅಂತರದಿಂದ ಭರ್ಜರಿ ಜಯ ದಾಖಲಿಸಿದೆ.
ಟಾಸ್ ಜಯಿಸಿದ ಆರ್‌ಸಿಬಿ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತು. ನಾಯಕ ಎಫ್‌ಡು ಪ್ಲೆಸಿಸ್(55 ರನ್, 44 ಎಸೆತ) ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್(54 ರನ್, 33 ಎಸೆತ)ಅರ್ಧಶತಕದ ಕೊಡುಗೆ ನೀಡಿದರು.
ಗೆಲ್ಲಲು 172 ರನ್ ಗುರಿ ಬೆನ್ನಟ್ಟಿದ ಆತಿಥೇಯ ರಾಜಸ್ಥಾನ ತಂಡ ವೇಯ್ನಾ ಪಾರ್ನೆಲ್(3-10), ಮೈಕಲ್ ಬ್ರೆಸ್‌ವೆಲ್(2-16) ಹಾಗೂ ಕರ್ಣ್ ಶರ್ಮಾ (2-19)ದಾಳಿಗೆ ತತ್ತರಿಸಿ 10.3 ಓವರ್‌ಗಳಲ್ಲಿ ಕೇವಲ 59 ರನ್‌ಗೆ ಆಲೌಟಾಯಿತು. ರಾಜಸ್ಥಾನದ ಪರ ಶಿಮ್ರಾನ್ ಹೆಟ್ಮೆಯರ್(35 ರನ್, 19 ಎಸೆತ)ಸರ್ವಾಧಿಕ ಸ್ಕೋರ್ ಗಳಿಸಿದರು. ಆರಂಭಿಕ ಬ್ಯಾಟರ್‌ಗಳಾದ ಯಶಸ್ವಿ ಜೈಸ್ವಾಲ್ ಹಾಗೂ ಜೋಸ್ ಬಟ್ಲರ್ ರನ್ ಖಾತೆ ತೆರೆಯುವಲ್ಲಿ ವಿಫಲವಾದರು.
Next Story