ಸಿಬಿಎಸ್‌ಇ ಫಲಿತಾಂಶ: ಬರಕಾ ಇಂಟರ್‌ನ್ಯಾಶನಲ್ ಸ್ಕೂಲ್ ಸತತ ಶೇ. 100 ಸಾಧನೆ

ಮಂಗಳೂರು: ಇತ್ತೀಚೆಗೆ ಪ್ರಕಟಗೊಂಡ ಸಿಬಿಎಸ್‌ಇ 10ನೇ ಹಾಗೂ 12ನೇ ತರಗತಿ ವಾರ್ಷಿಕ ಪರೀಕ್ಷೆಯ ಫಲಿತಾಂಶದಲ್ಲಿ ಮಂಗಳೂರು ಅಡ್ಯಾರಿನ ಬರಕಾ ಇಂಟರ್‌ನ್ಯಾಶನಲ್ ಸ್ಕೂಲ್ ಸತತ ಮೂರನೇ ಬಾರಿಗೆ ಶೇ 100 ಫಲಿತಾಂಶ ದಾಖಲಿಸಿದೆ.
ಹತ್ತನೇ ತರಗತಿಯಲ್ಲಿ ಹಾಜರಾದ ವಿದ್ಯಾರ್ಥಿಗಳಲ್ಲಿ 18 ವಿಶಿಷ್ಟ ಶ್ರೇಣಿ, 27 ಪ್ರಥಮ ಶ್ರೇಣಿ ಹಾಗೂ 3 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
12ನೇ ತರಗತಿಯಲ್ಲಿ 04 ವಿಶಿಷ್ಟ ಶ್ರೇಣಿ, 10 ಪ್ರಥಮ ಶ್ರೇಣಿ ಹಾಗೂ 1 ವಿದ್ಯಾರ್ಥಿ ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಈ ವಿದ್ಯಾರ್ಥಿಗಳಲ್ಲಿ 5 ಮಂದಿ ಹಾಫಿಝಾ ಹಾಗೂ ಓರ್ವ ಹಾಫಿಝ್ ವಿದ್ಯಾರ್ಥಿಯೂ ಸೇರಿರುತ್ತಾರೆ ಎನ್ನುವುದು ವಿಶೇಷ. ತೇರ್ಗಡೆಗೊಂಡ ಎಲ್ಲಾ ವಿದ್ಯಾರ್ಥಿಗಳನ್ನು ಶಾಲೆಯ ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿ ಅಭಿನಂದಿಸಿದೆ.
Next Story