ಕಾರ್ಕಳ: ಸುನೀಲ್ ಕುಮಾರ್ ಸಂಭ್ರಮೋತ್ಸವ
ಕಾರ್ಕಳ : ನೂತನ ಶಾಸಕ ಸುನೀಲ್ ಕುಮಾರ್ ವಿಜಯೋತ್ಸವು ಕಾರ್ಕಳದಲ್ಲಿ ನಡೆಯಿತು.
ಕಾರ್ಕಳದ ಅನಂತಶಯನದಿಂದ ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಸಾಗಿದ ಸುನೀಲ್ ಕುಮಾರ್ ಕಾರ್ಕಳದ ಬಂಡಿಮಠದಲ್ಲಿ ಸಭಾ ಕಾರ್ಯಕ್ರಮದೊಂದಿಗೆ ಸಮಾಪನಗೊಂಡಿತು.
ಈ ಸಂದರ್ಭದಲ್ಲಿ ಕಾರ್ಕಳ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಮಹಾವೀರ ಹೆಗ್ಡೆ, ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಬಿಜೆಪಿ ಮುಖಂಡರಾದ ಬೋಳ ಪ್ರಭಾಕರ್ ಕಾಮತ್, ಎಂ ಕೆ ವಿಜಯ ಕುಮಾರ್, ಕೆಪಿ ಶೆಣೈ, ರವೀಂದ್ರ ಶೆಟ್ಟಿ ಬಜಗೋಳಿ, ಮಣಿರಾಜ್ ಶೆಟ್ಟಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ನ್ಯಾಯವಾದಿ ರವೀಂದ್ರ ಮೊಯಿಲಿ ಸ್ವಾಗತಿಸಿದರು. ನರಸಿಂಹ ಕಾಮತ್ ಸಾಣೂರು ಪ್ರಸ್ತಾವನೆಗೈದರು