ಮೇ 17ರಿಂದ ಬಹುಮುಖಿ ಸಾಂಸ್ಕೃತಿಕ ಉತ್ಸವ

ಶಿರ್ವ, ಮೇ 14: ಪಾಂಬೂರು ಪರಿಚಯ ಪ್ರತಿಷ್ಠಾನವು ‘ವಸಂತ ಕಲಾ ಸೌರಭ’ ಬಹುಮುಖಿ ಸಾಂಸ್ಕೃತಿಕ ಉತ್ಸವವನ್ನು ಮೇ 17ರಿಂದ ಮೇ 20ರವರೆಗೆ ಪ್ರತಿದಿನ ಸಂಜೆ 6.30ಗಂಟೆಯಿಂದ ಪಾಂಬೂರು ರಂಗಪರಿಚಯ ವೇದಿಕೆಯಲ್ಲಿ ಆಯೋಜಿಸಲಾಗಿದೆ.
ಮೇ 17ರಂದು ಕೊಂಕಣಿಯ ಸಾಹಿತಿ ಹಾಗೂ ಕವಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಕೊಂಕಣಿ ಭಾಷಾ ಸಂಚಾಲಕರಾಗಿರುವ ಮೆಲ್ವಿನ್ ರೊಡ್ರಿಗಸ್ ರವರೊಂದಿಗೆ ಮುಖಾಮುಖಿ, ವಾಚನ, ಗಾಯನ, ಕಥಾ ಪ್ರಸ್ತುತಿಯ ಕವಿತಾ ರಂಗ್ ಕಾರ್ಯಕ್ರಮ ಜರಗಲಿದೆ. ಸಿತಾರ್ ಕಲಾವಿದ ಉಸ್ತಾದ್ ರಫೀಕ್ ಖಾನ್‌ರವರ ಸಂಗೀತ ನಿರ್ದೇಶನದಲ್ಲಿ ಕಲಾವಿದರು ಭಾಗವಹಿಸಲಿದ್ದಾರೆ.
ಮೇ 18ರಂದು ಸಂತ ಅಲೋಶಿಯಸ್ ರಂಗ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳಿಂದ ರಂಗಗೀತೆಗಳು ಹಾಗೂ ಹ್ಯಾಂಗ್‌ಆನ್ ನಾಟಕ ಪ್ರದರ್ಶನ ಗೊಳ್ಳಲಿದೆ. ಮೇ 19 ಮತ್ತು 20ರಂದು ಕನ್ನಡ ಸಿನೆಮಾ ರಂಗದ ಸೃಜನಶೀಲ ನಿರ್ದೇಶಕ ಮಂಸೋರೆಯವರ ಮಂಸೋರೆ ಸಿನೆಹಬ್ಬ ಜರಗಲಿದೆ. ಮೇ 19, 20, 21 ಹಾಗೂ ಮೇ 20ರಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಹರಿವು ಚಲನಚಿತ್ರ ಪ್ರದರ್ಶನಗೊಳ್ಳಲಿದೆ ಎಂದು ಪರಿಚಯ ಪ್ರತಿಷ್ಠಾನ ಪ್ರಕಟಣೆ ತಿಳಿಸಿದೆ.





