ಅಂಬಲಪಾಡಿ: ವೇಷಗಾರಿಕೆ ಕಮ್ಮಟ ಸಮಾರೋಪ

ಉಡುಪಿ, ಮೇ 14: ಅಂಬಲಪಾಡಿ ಶ್ರೀ ಲಕ್ಷ್ಮೀಜನಾರ್ದನ ಯಕ್ಷಗಾನ ಕಲಾ ಮಂಡಳಿ, ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಹಯೋಗದಲ್ಲಿ ಹಮ್ಮಿ ಕೊಂಡ 5 ದಿನಗಳ ವೇಷಗಾರಿಕೆ ಕಮ್ಮಟ ಶನಿವಾರ ಅಂಬಲಪಾಡಿ ಶ್ರೀ ಜನಾರ್ದನ ಮಂಟಪದಲ್ಲಿ ಸವಾಪನಗೊಂಡಿತು.
ನರಸಿಂಹ ತುಂಗ ಮತ್ತು ಮಿಥುನ್ ಕುಮಾರ್ ಮಾರ್ಗದರ್ಶನದಲ್ಲಿ 20 ವಿದ್ಯಾರ್ಥಿಗಳು ವಿವಿಧ ವೇಷಗಳ ಮುಖ ವರ್ಣಿಕೆ ಮಾಡುವುದು ಮತ್ತು ಕಿರೀಟ ಕಟ್ಟಿಕೊಳ್ಳುವ ಕೌಶಲವನ್ನು ಈ ಶಿಬಿರದಲ್ಲಿ ತಿಳಿದುಕೊಂಡರು. ಸಮಾರೆಪ ಸಮಾರಂಭದಲ್ಲಿ ವಿಜಯ ಕುಮಾರ್ ಮುದ್ರಾಡಿ, ವಿದ್ಯಾ ಪ್ರಸಾದ್ ಹಾಗೂ ಗೋವಿಂದ ಭಂಡಾರಿ ಪಾಲ್ಗೊಂಡರು.
ಮುರಲಿ ಕಡೆಕಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಡಳಿಯ ಅಧ್ಯಕ್ಷ ಕೆ.ಅಜಿತ್ ಕುಮಾರ್ ಮಾತನಾಡಿ ದರು. ಶಿಬಿರಾರ್ಥಿಗಳ ಪರವಾಗಿ ಶೈಲೇಶ್, ಮಾನ್ಯ, ಅದಿತಿ ಹಾಗೂ ಶ್ರಾವ್ಯ ಅನುಭವನ್ನು ಹಂಚಿಕೊಂಡರು. ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು.
Next Story