ಉಡುಪಿ: ತುರ್ತು ಚಿಕಿತ್ಸೆಗೆ ಹಣ ನೀಡುವಂತೆ ನಂಬಿಸಿ ವಂಚನೆ; ಪ್ರಕರಣ ದಾಖಲು
ಉಡುಪಿ, ಮೇ 14: ತುರ್ತು ಚಿಕಿತ್ಸೆಗೆ ಹಣದ ಅವಶ್ಯಕತೆ ಇದೆ ಎಂದು ನಂಬಿಸಿ ಲಕ್ಷಾಂತರ ರೂ. ಮೋಸ ಮಾಡಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಡಂಕೂರು ಪುತ್ತೂರಿನ ಭೀಮಾರಾಮ್ (43) ಎಂಬವರಿಗೆ ಮೇ 1ರಂದು ಅಪರಿಚಿತ ವ್ಯಕ್ತಿ ಕರೆ ಮಾಡಿ ತಾನು ರಾಜಾಸ್ಥಾನದ ತಮ್ಮ ಪರಿಚಯದ ವ್ಯಕ್ತಿ ಎಂದು ಹೇಳಿದ್ದು, ನನ್ನ ಸಂಬಂಧಿಕರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಬಗ್ಗೆ ದಾಖಲಾಗಿದ್ದು, ಅದಕ್ಕಾಗಿ ತುರ್ತಾಗಿ ಹಣದ ಅವಶ್ಯಕತೆ ಇದೆ ಎಂದು ತಿಳಿಸಿದ್ದರು.
ಅದನ್ನು ನಂಬಿದ ಭೀಮಾರಾಮ್ ಆತ ತಿಳಿಸಿದ ಬ್ಯಾಂಕ್ ಖಾತೆಗೆ ಅದೇ ದಿನ ಒಟ್ಟು 1,38,000ರೂ. ಹಣವನ್ನು ಆನ್ ಲೈನ್ ಮುಖೇನ ವರ್ಗಾವಣೆ ಮಾಡಿದ್ದಾರೆ. ಆದರೆ ಆ ಅಪರಿಚಿತ ವ್ಯಕ್ತಿ ಇವರನ್ನು ನಂಬಿಸಿ, ಮೋಸದಿಂದ ಹಣ ಪಡೆದಿರುವುದಾಗಿ ದೂರಲಾಗಿದೆ.
Next Story