16 ಮತಗಳ ಅಂತರದಿಂದ ಸೋಲು: ಕೋರ್ಟ್ ಮೊರೆ ಹೋಗಲು ಸೌಮ್ಯಾ ರೆಡ್ಡಿ ನಿರ್ಧಾರ

ಬೆಂಗಳೂರು, ಮೇ 14: ‘ಕೇವಲ 16 ಮತಗಳ ಅಂತರದಿಂದ ಸೋತ ಜಯನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಕೋರ್ಟ್‍ಗೆ ಮೊರೆ ಹೋಗಲು ನಿರ್ಧರಿಸಿದ್ದಾರೆ.
ರವಿವಾರ ಕುರಿತು ಟ್ವೀಟ್ ಮಾಡಿರುವ ಅವರು, ‘ಜಯನಗರ ಕ್ಷೇತ್ರದಲ್ಲಿ ನನಗೆ ಮತವನ್ನು ಹಾಕಿದವರಿಗೆ ನಾನು ಋಣಿಯಾಗಿದ್ದೇನೆ. ಸಾವಿರಾರು ಜನರು ನನಗೆ ಬೆಂಬಲವಾಗಿ ನಿಂತಿದ್ದೀರಿ. ಜಯನಗರ ಕ್ಷೇತ್ರದ ಮತೆಣಿಕೆಯಲ್ಲಿ ಅನ್ಯಾಯವಾಗಿದ್ದು, ಇದರ ವಿರುದ್ಧ ನಾನು ನಡೆಸುವ ಹೋರಾಟದಲ್ಲಿ ಜೊತೆಯಾಗಿರಬೇಕು ಎಂದು ಮನವಿ ಮಾಡಿದ್ದಾರೆ.
ಜಯನಗರ ಕ್ಷೇತ್ರದ ಎಣಿಕೆ ಸಂದರ್ಭದಲ್ಲಿ ಗೊಂದಲಗಳು ಉಂಟಾಗಿ ಶನಿವಾರ ತಡರಾತ್ರಿ ಫಲಿತಾಂಶ ಪ್ರಕಟವಾಯಿತು. ಬಿಜೆಪಿ ಅಭ್ಯರ್ಥಿ ರಾಮಮೂರ್ತಿ ಅವರು 16 ಮತಗಳಿಂದ ಸೌಮ್ಯರೆಡ್ಡಿಯನ್ನು ಸೋಲಿಸಿದ್ದಾರೆ.
ಇದಕ್ಕೂ ಮೊದಲು ಎರಡು ಬಾರಿ ಮತ ಎಣಿಕೆ ನಡೆಸಿದಾಗ ಸೌಮ್ಯರೆಡ್ಡಿ ಅವರು ಸುಮಾರು 100 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. ನಂತರ ಮತ ಎಣಿಕೆ ಮಾಡಿದಾಗ ರಾಮಮೂರ್ತಿ ಅವರಿಗೆ 16 ಮತಗಳು ಹೆಚ್ಚಾಗಿ ಬಂದವು.
ವಿಧಾನಸಭೆ ಚುನಾವಣೆಯಲ್ಲಿ ನನಗೆ ಮತ ನೀಡಿ ಆಶೀರ್ವದಿಸಿದ ಜಯನಗರದ ನನ್ನ ಪ್ರೀತಿಯ ಜನತೆಗೆ ಮತ್ತು ಕಾಂಗ್ರೆಸ್ ಕಾರ್ಯಕರ್ತರಿಗೆ ಮತ್ತು ನನ್ನ ಬೆನ್ನೆಲುಬಾಗಿ ನಿಂತ ನಾಯಕರಿಗೆ ಅನಂತ ಧನ್ಯವಾದಗಳು.
— Sowmya | ಸೌಮ್ಯ (@Sowmyareddyr) May 14, 2023
ಕಷ್ಟದ ಸಂದರ್ಭದಲ್ಲಿ ಒಗ್ಗಟ್ಟು ಪ್ರದರ್ಶಿಸಿ ನನ್ನ ಜೊತೆ ನಿಂತ ಸಾವಿರಾರು ಜನರಿಗೆ ಇದೇ ಸಂದರ್ಭದಲ್ಲಿ ನಮನಗಳನ್ನು ಸಲ್ಲಿಸುತ್ತೇನೆ.
ಫಲಿತಾಂಶ…







