ಚಿತ್ರದುರ್ಗ | ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ, ನಾವು ವಿದ್ಯುತ್ ಬಿಲ್ ಕಟ್ಟಲ್ಲ ಎಂದು ಪಟ್ಟು ಹಿಡಿದ ಗ್ರಾಮಸ್ಥರು

ಚಿತ್ರದುರ್ಗ : ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ, ನಾವು ಬಿಲ್ ಕಟ್ಟಲ್ಲ ಎಂದು ಗ್ರಾಮಸ್ಥರು ಬೆಸ್ಕಾಂ ಸಿಬ್ಬಂದಿ ಮುಂದೆ ಪಟ್ಟು ಹಿಡಿದಿರುವ ಘಟನೆಯೊಂದು ಜಿಲ್ಲೆಯ ಜಾಲಿಕಟ್ಟೆ ಗ್ರಾಮದಲ್ಲಿ ನಡೆದಿದೆ.
'ವಿದ್ಯುತ್ ಉಚಿತ' ಎಂದು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಿಸಿದೆ. ಈಗ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆಯಲ್ಲ, ಯಾಕೆ ವಿದ್ಯುತ್ ಬಿಲ್ ಕಟ್ಟಬೇಕೆಂದು ಮೀಟರ್ ರೀಡರ್ ಗೆ ಜನರು ಪ್ರಶ್ನಿಸುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬೆಸ್ಕಾಂ ಮೀಟರ್ ರೀಡರ್, ಆದೇಶ ಬರುವವರೆಗೆ ಬಿಲ್ ಕಟ್ಟಬೇಕೆಂದು ತಾಕೀತು ಮಾಡಿದರೂ, ಪಟ್ಟು ಬಿಡದ ಗ್ರಾಮಸ್ಥರು ಆದೇಶದ ಬಗ್ಗೆ ಕಾಂಗ್ರೆಸ್ ನವರಿಗೇ ಕೇಳಿ ಎಂದಿದ್ದಾರೆ.
— Parameswara.M (@Parameswara_MDH) May 15, 2023
Next Story





