ಶಿವಮೊಗ್ಗ | ಹಣಕ್ಕಾಗಿ ಯುವತಿಯ ಅಪಹರಣ; ಪತ್ತೆಗೆ ಪೊಲೀಸರ ಮನವಿ

ಶಿವಮೊಗ್ಗ: ಹಣಕ್ಕಾಗಿ ಯುವತಿಯೊಬ್ಬಳನ್ನು ಅಪಹರಣ ಮಾಡಿರುವ ಘಟನೆ ಇಲ್ಲಿನ ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ರಂಜಿತಾ (22) ಎಂಬ ಯುವತಿಯು ಮೇ 14 ರಂದು ಸಂಜೆ 5 ಗಂಟೆಯಿಂದ ರಾತ್ರಿ 9.30ರ ಅವಧಿಯಲ್ಲಿ ಹಣಕ್ಕಾಗಿ ದುಷ್ಕರ್ಮಿಗಳು ಅಪಹರಣ ಮಾಡಿದ್ದಾರೆ.
ಯುವತಿಯು ಸುಳಿವು ಯಾರಿಗಾದರೂ ಸಿಕ್ಕಲ್ಲಿ ಜಯನಗರ ಪೊಲೀಸ್ ಠಾಣೆ ಶಿವಮೊಗ್ಗ, ಜಿಲ್ಲಾ ನಿಸ್ತಂತು ಕೇಂದ್ರ ಅಥವಾ ಪೊಲೀಸ್ ಕಂಟ್ರೋಲ್ ರೂಂ ದೂ.ಸಂ: 08182-261400, 261413, 261416ನ್ನು ಸಂಪರ್ಕಿಸಬಹುದೆಂದು ಜಯನಗರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





