ಧರ್ಮಸ್ಥಳ: ನೇತ್ರಾವತಿ ನದಿಗೆ ಬಿದ್ದು ವ್ಯಕ್ತಿ ಮೃತ್ಯು

ಧರ್ಮಸ್ಥಳ: ಸಮೀಪದ ನೇತ್ರಾವತಿ ನದಿಗೆ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಸೋಮವಾರ ನಡೆದಿದೆ.
ಹಾಸನದ ಹರಳಹಳ್ಳಿಯ ಕೃಷ್ಣಪ್ಪ ಗೌಡ ಎಚ್.ಟಿ. (52) ಮೃತರು ಎಂದು ಗುರುತಿಸಲಾಗಿದೆ.
ತನ್ನ ಪತ್ನಿ ಮಗನೊಂದಿಗೆ ಸ್ನಾನಕ್ಕೆ ಬಂದಿದ್ದು ನದಿ ನೀರಿಗೆ ಇಳಿದಿದ್ದರು. ಈ ವೇಳೆ ಪತ್ನಿ ಹಾಗೂ ಮಗನಿಗೆ ನೀರಿನಿಂದ ಮೇಲೆ ಬರಲಾಗದಿದ್ದು, ಅವರನ್ನು ಮೇಲೆಳೆದು ಅವರ ಪ್ರಾಣ ರಕ್ಷಿಸಿದ ಕೃಷ್ಣಪ್ಪ ಆಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ.
ಘಟನೆ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
Next Story