ಬಿಜೆಪಿ ಮುಖಂಡರ ಸಭೆ: ವಿಪಕ್ಷ ನಾಯಕ ಸ್ಥಾನದ ರೇಸ್‌ನಲ್ಲಿ ಯಾರಿದ್ದಾರೆ?

ಬೆಂಗಳೂರು, ಮೇ 15: ಕರ್ನಾಟಕ ವಿಧಾನ ಸಭೆಗೆ ಪ್ರತಿಪಕ್ಷದ ನಾಯಕ ಹಾಗೂ ಉಪ ನಾಯಕನ ಆಯ್ಕೆ ಮಾಡಲು ಬಿಜೆಪಿ ಕೂಡ ಅನೌಪಚಾರಿಕ ಸಭೆ ನಡೆಸಿದೆ.
ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಚಿವ ಆರ್. ಅಶೋಕ್ ಅವರನ್ನು ಪ್ರತಿಪಕ್ಷದ ನಾಯಕರೆಂದು ಪರಿಗಣಿಸಲಾಗಿದೆ.
ಪ್ರತಿಪಕ್ಷದ ನಾಯಕರ ಹುದ್ದೆಗೆ ಕೇಳಿ ಬರುತ್ತಿರುವ ಇತರ ಹೆಸರುಗಳೆಂದರೆ ಮಾಜಿ ಸಚಿವ ಎಸ್. ಸುರೇಶ್ ಕುಮಾರ್, ವಿ. ಸುನೀಲ್ ಕುಮಾರ್ ಹಾಗೂ ಬಸವನಗೌಡ ಪಾಟೀಲ್ ಯತ್ನಾಳ್.
ಇದನ್ನೂ ಓದಿ: 16 ಮತಗಳಿಂದ ಗೆದ್ದು ಸೋತ ಸೌಮ್ಯಾರೆಡ್ಡಿ; ಅದೇ ಹೆಸರಿನ ಪಕ್ಷೇತರ ಅಭ್ಯರ್ಥಿಗೆ ಸಿಕ್ಕ ಮತಗಳೆಷ್ಟು ಗೊತ್ತೇ?
Next Story